ಕರ್ನಾಟಕ

karnataka

ETV Bharat / city

ಕುಮಾರಸ್ವಾಮಿ ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುತ್ತಿದ್ದಾರೆ: ಪ್ರಮೋದ್​ ಮುತಾಲಿಕ್ ಕಿಡಿ - ಪೌರತ್ವ (ತಿದ್ದುಪಡಿ) ಕಾಯ್ದೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳನ್ನು ದುರ್ಬಲಗೊಳಿಸುತ್ತಿದ್ದು, ಬಾಂಬ್ ಪತ್ತೆ ಮಾಡಿರುವುದನ್ನು ಅಣಕು ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದರು.

srirama-sena-chief-pramod-muthalik
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್

By

Published : Jan 23, 2020, 7:43 PM IST

ಹೊಸಪೇಟೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪೊಲೀಸ್ ಅಧಿಕಾರಿಗಳನ್ನು ದುರ್ಬಲಗೊಳಿಸುತ್ತಿದ್ದು, ಬಾಂಬ್ ಪತ್ತೆ ಮಾಡಿರುವುದನ್ನು ಅಣಕು ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದರು.

ನಗರದ ಪರಿವೀಕ್ಷಣೆ ಮಂದಿರದಲ್ಲಿ ತಮ್ಮ 68ನೇ ಹುಟ್ಟುಹಬ್ಬ ಆಚರಿಸಿಕೊಂಡು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಪೊಲೀಸ್ ಇಲಾಖೆಯ ಕುರಿತು ಒಳ್ಳೆಯ ಅಭಿಪ್ರಾಯ ಹೇಳಿ, ಆತ್ಮ ವಿಶ್ವಾಸವನ್ನು ತುಂಬಬೇಕು ಎಂದರು.

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್

ಆದಿತ್ಯರಾವ್ ಒಬ್ಬ ನಿರುದ್ಯೋಗಿ, ಮಾನಸಿಕ ಅಸ್ವಸ್ಥ. ಅದೇನೇ ಇರಲಿ ಅಂತಹ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು. ಅವರನ್ನು ಗಲ್ಲಿಗೇರಿಸಬೇಕು ಎಂದರು.

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ನಾನು ಸ್ವಾಗತ ಮಾಡುತ್ತೇನೆ. ದೇಶದಲ್ಲಿರುವ ಮುಸ್ಲಿಂರಿಗೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ. ದೇಶದಲ್ಲಿರುವ ಮುಸ್ಲಿಂ ಧರ್ಮದವರು ನಮ್ಮ ದೇಶದ ಭಾರತೀಯರು. ಅವರನ್ನು ಕಾಂಗ್ರೆಸ್ ಪಕ್ಷದವರು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.ಮುಸ್ಲಿಂ ಧರ್ಮದವರಿಗೆ ಭಾರತೀಯರು ಯಾವುದೇ, ರೀತಿಯ ತೊಂದರೆಯನ್ನು ಕೊಟ್ಟಿಲ್ಲ. ಆದರೆ ಪಾಕಿಸ್ತಾನಿ ಉಗ್ರರು ನಮ್ಮ ದೇಶಕ್ಕೆ ತೊಂದರೆಯನ್ನು ಕೊಡುತ್ತಾರೆ ಎಂದರು.

ABOUT THE AUTHOR

...view details