ಹೊಸಪೇಟೆ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಉತ್ಸವಕ್ಕೆ ಗಜಶಾಲೆ ಮತ್ತು ಒಂಟಿ ಮಂಟಪದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ ಎಂದು ವಾರ್ತಾ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರವೀಂದ್ರ ತಿಳಿಸಿದರು.
ಐತಿಹಾಸಿಕ ಹಂಪಿ ಉತ್ಸವ: ಗತವೈಭವ ಪ್ರದರ್ಶನಕ್ಕೆ ಸಿದ್ದವಾಗುತ್ತಿದೆ ಧ್ವನಿ, ಬೆಳಕಿನ ವೇದಿಕೆ - ಧ್ವನಿ ಬೆಳಕು ಹಂಪಿ ಉತ್ಸವ ಕಾರ್ಯಕ್ರಮ
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಉತ್ಸವಕ್ಕೆ ಗಜಶಾಲೆ ಮತ್ತು ಒಂಟಿ ಮಂಟಪದಲ್ಲಿ ವೇದಿಕೆ ಸಜ್ಜುಗೊಳ್ಳುತ್ತಿದೆ ಎಂದು ವಾರ್ತಾ ಇಲಾಖೆ ತಾಂತ್ರಿಕ ವಿಭಾಗದ ಅಧಿಕಾರಿ ರವೀಂದ್ರ ತಿಳಿಸಿದರು.
![ಐತಿಹಾಸಿಕ ಹಂಪಿ ಉತ್ಸವ: ಗತವೈಭವ ಪ್ರದರ್ಶನಕ್ಕೆ ಸಿದ್ದವಾಗುತ್ತಿದೆ ಧ್ವನಿ, ಬೆಳಕಿನ ವೇದಿಕೆ ಹಂಪಿ ಉತ್ಸವ](https://etvbharatimages.akamaized.net/etvbharat/prod-images/768-512-5504951-thumbnail-3x2-lek.jpg)
ಹೊಸಪೇಟೆ ತಾಲೂಕಿನ ಭವ್ಯ ಪರಂಪರೆಯನ್ನು ಮೆರೆಯುವ ಹಂಪಿ ಉತ್ಸವಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನೇತೃತ್ವದಲ್ಲಿ ಹಂಪಿಯ ಗಜಶಾಲೆ ಹಾಗೂ ಒಂಟಿ ಸಾಲಿನ ಮಂಟಪದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ಈ ವೇದಿಕೆಯಲ್ಲಿ ಧ್ವನಿ ಮತ್ತು ಬೆಳಕು ಮೂಲಕ ವಿಜಯ ನಗರದ ಗತ ವೈಭವನ್ನು ಸಾರುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜನವರಿ 10 ರಿಂದ ಪ್ರಾರಂಭವಾಗಿ 16 ನೇ ತಾರೀಖಿನ ತನಕ ಪ್ರತಿದಿನ ರಾತ್ರಿ 7 ರಿಂದ 9 ಗಂಟೆಯವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲಾಗುತ್ತದೆ. ಹಂಪಿಯ ಕೆಲ ಸ್ಮಾರಕಗಳ ವಿದ್ಯುತ್‌ಚಾಲಿತ ಯಂತ್ರದ ಮೂಲಕ ಕಂಗೊಳಿಸಲಿದೆ. ಈ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಕಲಾವಿದರು ತಮ್ಮ ಕಲಾ ತಂಡದೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ವಿಜಯನಗರಕಾಲದ ಗತವೈಭವ ಮತ್ತೆ ನೆನಪು ಮಾಡುವಂತೆ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ ಎಂದರು.