ಬಳ್ಳಾರಿ :ಮೂಗ ಗರ್ಭಿಣಿಯೊಂದಿಗೆ ಸ್ಟಾಫ್ ನರ್ಸ್ ಒಬ್ಬಳು ಅನುಚಿತವಾಗಿ ವರ್ತಿಸಿದ್ದಲ್ಲದೇ, ನವಜಾತ ಶಿಶುವಿನ ಸಾವಿಗೆ ಕಾರಣರಾದ ಹಿನ್ನಲೆ, ಕಾರಣ ಕೇಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಶೋಕಾಸ್ ನೋಟಿಸ್ ನೀಡಿದ್ದಾರೆ.
ಮೂಗ ಗರ್ಭಿಣಿ ಜೊತೆ ನರ್ಸ್ ಅನುಚಿತ ವರ್ತನೆ ಆರೋಪ: ಮಗು ಪಡೆಯುವ ಕನಸು ನುಚ್ಚುನೂರುಎಂಬ ಶಿರ್ಷಿಕೆ ಅಡಿಯಲ್ಲಿ ಮೇ 19 ರಂದು ಈಟಿವಿ ಭಾರತ ವಿಸ್ತ್ರೃತ ವರದಿ ಪ್ರಕಟಿಸಿತ್ತು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಡಾ.ಜನಾರ್ಧನ್ ಅವರು, ಹಗರಿಬೊಮ್ಮನಹಳ್ಳಿ ತಾಲೂಕು ಆರೋಗ್ಯಾಧಿಕಾರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಶೋಕಾಸ್ ನೋಟಿಸ್ ಕುರಿತು ಮಾತನಾಡಿದ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಈ ಕುರಿತು ಡಾ.ಹೆಚ್.ಎಲ್.ಜನಾರ್ಧನ್ ಮಾತನಾಡಿ, ಅವತ್ತಿನ ದಿನವೇ ಆರ್ಸಿಹೆಚ್ಒ ಅಧಿಕಾರಿ ಅವರಿಗೆ ಹಗರಿಬೊಮ್ಮನಹಳ್ಳಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದೆ.
ಆ ದಿನ ಯಾರೂ ಪ್ರಸೂತಿ ವೈದ್ಯರಿದ್ದರು. ಸ್ಟಾಫ್ ನರ್ಸ್ ಯಾರಿದ್ದರು? ಎಂಬಿತ್ಯಾದಿ ವಿಷಯಗಳನ್ನು ಅಡಕಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿರೋದಾಗಿ ಡಿಹೆಚ್ಒ ಡಾ.ಜನಾರ್ಧನ್ ತಿಳಿಸಿದರು.
ಅಲ್ಲದೇ, ಆರ್ಸಿಹೆಚ್ಒ ಅಧಿಕಾರಿಯನ್ನ ಅಲ್ಲಿಗೆ ಕಳುಹಿಸಿ ಇಡೀ ಘಟನೆಯ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿರುವೆ. ಅವರು ಸಲ್ಲಿಸಿದ ವರದಿಯನ್ನ ಆಧರಿಸಿ ಮುಂದಿನ ಶಿಸ್ತುಕ್ರಮ ಜರುಗಿಸಲು ಆರೋಗ್ಯ ಇಲಾಖೆ ಮುಂದಾಗಲಿದೆ ಎಂದು ಹೇಳಿದರು.