ಕರ್ನಾಟಕ

karnataka

ETV Bharat / city

ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆ: ಮಾಜಿ ಶಾಸಕ - ದುಡ್ಡುಕೊಟ್ಟು ಮತ

ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ, ಅಂಥವರ ವಿರುದ್ಧ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.

Vijayanagar constituency by-election

By

Published : Nov 8, 2019, 11:05 PM IST

ಹೊಸಪೇಟೆ:ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ. ಅಂಥವರ ವಿರುದ್ಧ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.

ರೈನ್​​ಬೋ ಭವನದಲ್ಲಿ ನಡೆದ ಜೆಡಿಎಸ್​​​ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವವರಿಗೆ ಹಾಕಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ಎನ್.ನಬಿ

ನಾವು-ನೀವೆಲ್ಲಾ ಅರಮನೆಯಲ್ಲಿ ಬೆಳೆದವರಲ್ಲ. ಸರಳ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಹೊಸಪೇಟೆ ಅಭಿವೃದ್ಧಿಗೆ ಹಾಗೂ ಜನರ ಸೇವೆ ಸಲ್ಲಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ABOUT THE AUTHOR

...view details