ಕರ್ನಾಟಕ

karnataka

ETV Bharat / city

ಟ್ರಾನ್ಸ್​​ಜೆಂಡರ್​ಗೆ 1% ಮೀಸಲಾತಿ ಸ್ವಾಗತಾರ್ಹ: ಸಮರ್ಪಕ ಅನುಷ್ಠಾನಕ್ಕೆ ಸಂಗಮ ಸಂಸ್ಥೆ ಆಗ್ರಹ - 1% reservation for transgender

ಟ್ರಾನ್ಸ್​​ಜೆಂಡರ್ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ 1 ಮೀಸಲಾತಿ ಜಾರಿ ಮಾಡಿದೆ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಸಂಗಮ ಸಂಸ್ಥೆಯ ನೌಕರೆ ಅಶ್ವಿನಿ ರಾಜಣ್ಣ ತಿಳಿಸಿದ್ದಾರೆ.

Sangam Organization
ಸಂಗಮ ಸಂಸ್ಥೆ

By

Published : Jul 5, 2021, 5:07 PM IST

ಬಳ್ಳಾರಿ: ರಾಜ್ಯ ಸರ್ಕಾರ ಟ್ರಾನ್ಸ್​​ಜೆಂಡರ್​ಗೆ ಶೇ 1 ರಷ್ಟು ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕೆಂದು ಸಂಗಮ ಸಂಸ್ಥೆ ಆಗ್ರಹಿಸಿದೆ.

ಟ್ರಾನ್ಸ್​​ಜೆಂಡರ್​ಗೆ 1% ಮೀಸಲಾತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅಶ್ವಿನಿ ರಾಜಣ್ಣ

ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಗಮ ಸಂಸ್ಥೆಯ ನೌಕರೆ ಅಶ್ವಿನಿ ರಾಜಣ್ಣ, ಟ್ರಾನ್ಸ್​​ಜೆಂಡರ್ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಲಾದರೂ ಶ್ರಮಿಸಬೇಕಿದೆ. ಟ್ರಾನ್ಸ್​​ಜೆಂಡರ್ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಮೀಸಲಾತಿ ಜಾರಿ ಮಾಡಿದೆ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದರು.

ಇನ್ನು ಈ ಮೀಸಲಾತಿ ಕೇವಲ ಕಾಗದ ಪತ್ರಕ್ಕೆ ಮಾತ್ರ ಮೀಸಲಾಗದೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಅಶ್ವಿನಿ ರಾಜಣ್ಣ ಆಗ್ರಹಿಸಿದರು.

ABOUT THE AUTHOR

...view details