ಬಳ್ಳಾರಿ :ಬಳ್ಳಾರಿ ಮಾಹಾನಗರ ಪಾಲಿಕೆಗೆ ಮೇಜರ್ ಸರ್ಜರಿ ಮಾಡಲು ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್ ಮುಂದಾಗಿದ್ದಾರೆ. ಹತ್ತಾರು ವರ್ಷದಿಂದ ಪಾಲಿಕೆಯಲ್ಲಿಯೇ ಠಿಕಾಣಿ ಹೂಡಿರುವ 60ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಎಂದು ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.
ಒಂದೇ ಕಡೆ ಕರ್ತವ್ಯ ನಿರ್ವಹಿಸಿದರೆ ಭ್ರಷ್ಟಾಚಾರ, ಅಕ್ರಮ ವ್ಯವಹಾರ ಇನ್ನಿತರ ಕರ್ತವ್ಯ ಲೋಪ ಎಸಗುವ ಸಾಧ್ಯತೆ ಇರುವ ಕಾರಣಕ್ಕೆ ಪಾಲಿಕೆಯ ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್, ನೌಕರರ ವರ್ಗಾವಣೆಗೆ ನಗರಾಭಿವೃದ್ದಿ ಇಲಾಖೆ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಜೇಷ್ಠತಾ ಆಧಾರದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ 3 ರಿಂದ 4 ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು. ಆದರೆ, ಈ ಪಾಲಿಕೆಯ ಅಧಿಕಾರಿಗಳು ಮಾತ್ರ ವರ್ಗಾವಣೆಗೊಂಡಿಲ್ಲ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಸ್ವತಃ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.