ಕರ್ನಾಟಕ

karnataka

By

Published : Dec 7, 2019, 4:42 PM IST

ETV Bharat / city

ಸಂಡೂರಿನಲ್ಲಿ ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ

ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದ ಹೊರವಲಯದ ರೈತನ ಹೊಲದಲ್ಲಿ ಅಪರೂಪದ ಹುಣಸೆ ಮರ ವಿಶೇಷವಾಗಿ ಗಮನ ಸೆಳೆಯುತ್ತಿದೆ.

KN_BLY_2_SPL_TAMARIND_TREE_VSL_7203310
ಸಂಡೂರಿನಲ್ಲೊಂದು ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ

ಬಳ್ಳಾರಿ:ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದ ಹೊರವಲಯದ ರೈತನ ಹೊಲದಲ್ಲಿ ಅಪರೂಪದ ಹುಣಸೆ ಮರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮರದಲ್ಲಿ ಕೆಂಗುಲಾಬಿ ಮಿಶ್ರಿತ ಹುಣಸೆಕಾಯಿ ಜನಾಕರ್ಷಣೆಯಾಗಿದೆ.

ಸಂಡೂರಿನಲ್ಲೊಂದು ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ

ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದ ಕುಮಾರ ಗೌಡರ ಹೊಲದಲ್ಲಿರುವ ಹುಣಸೆ ಮರದಲ್ಲಿರುವ ಕಾಯಿ ಇತರೆ ಹುಣಸೆ ಮರದ ಕಾಯಿಗಿಂತಲೂ ಭಿನ್ನವಾಗಿದೆ. ವಿಶೇಷತೆ ಏನೆಂದರೆ, ಇದರ ಕಾಯಿಗಳು ಮೇಲ್ನೋಟಕ್ಕೆ ಇತರೆ ಹುಣಸೆ ಕಾಯಿಯಂತೆ ಕಂಡರೂ, ಕಾಯಿಯ ಮೇಲಿನ ಹಸಿರು ಸಿಪ್ಪೆ ತೆಗೆದರೆ, ಅದರ ಒಳಗಡೆ ಕಡು ಗುಲಾಬಿ ಬಣ್ಣದ ಹಣ್ಣು ಗೋಚರವಾಗುತ್ತದೆ. ಸಾಮಾನ್ಯವಾಗಿ ಹುಣಸೆ ಕಾಯಿಗಳ ತೊಗಟೆ ಹಸಿರಾಗಿದ್ದು, ಒಳಗಡೆ ತಿಳಿ ಬಿಳಿಯ ಪದರ ಗೋಚರಿಸುತ್ತದೆ.

ಗ್ರಾಮದ ರೈತ ಕುಮಾರಗೌಡ ಪಾಟೀಲ್ ಮಾತನಾಡಿ, ಈ ಗಿಡವನ್ನು ನಮ್ಮ ತಂದೆ ಅಜ್ಜನಗೌಡರು ನೆಟ್ಟು ಬೆಳೆಸಿದ್ದರು. ಸುಮಾರು 70 ವರ್ಷಗಳ ಹಳೆಯದಾದ ಮರ ಇದಾಗಿದ್ದು, ಹುಣಸೆ ಕಾಯಿ ಇದ್ದಾಗ ಮಾತ್ರ ಕೆಂಪು-ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ. ಹಣ್ಣಾದಾಗ ಇತರ ಹುಣಸೆ ಹಣ್ಣಿನಂತಿರುತ್ತದೆ. ರುಚಿ ಹುಳಿಯಾಗಿಯೇ ಇರುತ್ತದೆ. ನಮ್ಮ ಊರಲ್ಲಿ ಈ ಮರ ಇರುವುದು ವಿಶೇಷ ಎಂದು ಹೇಳಿದ್ರು.

ABOUT THE AUTHOR

...view details