ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ನಿಂದ 'ಕ್ಷಿಪ್ರ ಆಮ್ಲಜನಕ ಕೇಂದ್ರ' ಉದ್ಘಾಟನೆ - ಕ್ಷಿಪ್ರ ಆಮ್ಲಜನಕ ಕೇಂದ್ರ,

ಸೋನು ಸೂದ್ ಚಾರಿಟೇಬಲ್ ಟ್ರಸ್ಟ್​ನ 'ಕ್ಷಿಪ್ರ ಆಮ್ಲಜನಕ ಕೇಂದ್ರ'ವು ಬಳ್ಳಾರಿಯಲ್ಲಿಂದು ಉದ್ಘಾಟನೆಯಾಗಿದೆ. ಕಂಟ್ರೋಲ್ ರೂಂ​ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಅತೀ ಅವಶ್ಯಕವಾಗಿ ಆಕ್ಸಿಜನ್ ಕೊರತೆಯಿದ್ದವರು ಕಂಟ್ರೋಲ್ ರೂಂ ಸಂಖ್ಯೆ- 7069999961 ಕರೆ ಮಾಡಿ ಆಕ್ಸಿಜನ್ ಪಡೆಯಬಹುದು.

rapid-oxygen-center-opened-by-sonu-sood-charitable-trust
ಸೋನು ಸೂದ್ ಚಾರಿಟಬಲ್ ಟ್ರಸ್ಟ್

By

Published : Jun 1, 2021, 6:26 PM IST

ಬಳ್ಳಾರಿ: ರಾಜ್ಯ ರೈಲ್ವೆ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಕ್ಷಿಪ್ರ ಆಮ್ಲಜನಕ ಕೇಂದ್ರಕ್ಕೆ ಡಿಎಸ್‍ಆರ್​ಪಿ ವೆಂಕನಗೌಡ ಪಾಟೀಲ್ ಅವರು ಚಾಲನೆ ನೀಡಿದರು.

ಬಳಿಕ, ಮಾತನಾಡಿದ ಅವರು ಕ್ಷಿಪ್ರ ಆಮ್ಲಜನಕ ಕೇಂದ್ರವು ಕಂಟ್ರೋಲ್ ರೂಂ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಅತೀ ಅವಶ್ಯಕವಾಗಿ ಆಕ್ಸಿಜನ್ ಕೊರತೆಯಿದ್ದವರು ಕಂಟ್ರೋಲ್ ರೂಂಗೆ ಕರೆ ಮಾಡಿ ಆಕ್ಸಿಜನ್ ಪಡೆಯಬಹುದು. ನಗರದಿಂದ 80 ರಿಂದ 100 ಕಿ.ಮೀ ವ್ಯಾಪ್ತಿಯಲ್ಲಿರುವವರು ಕ್ಷಿಪ್ರ ಆಮ್ಲಜಕ ಕೇಂದ್ರದ ನೆರವು ಪಡೆಯಬಹುದು ಎಂದು ತಿಳಿಸಿದರು.

ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ನಿಂದ 'ಕ್ಷಿಪ್ರ ಆಮ್ಲಜನಕ ಕೇಂದ್ರ' ಉದ್ಘಾಟನೆ

ಸೋನು ಸೂದ್ ಚಾರಿಟೇಬಲ್ ಟ್ರಸ್ಟ್‌ನ ಅಮೀತ್ ಅವರು ಮಾತನಾಡಿ, ದೇಶಾದ್ಯಂತ ಉಚಿತ ಆಕ್ಸಿಜನ್​​​ ಪೂರೈಸಲಾಗುತ್ತಿದೆ. ಕೋವಿಡ್​ ಸೋಂಕಿತರಿಗೆ ಸೋನು ಸೂದ್ ನೆರವಾಗಿದ್ದಾರೆ. ಹಾಸನ, ದಾವಣಗೆರೆ, ಹುಬ್ಬಳ್ಳಿ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕ್ಷಿಪ್ರ ಆಮ್ಲಜನಕ ಕೇಂದ್ರವನ್ನು ತೆರಯಲಾಗಿದೆ. ಗಣಿನಾಡು ಬಳ್ಳಾರಿಗೆ 20 ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸಿಲಿಂಡರ್​ಗಳನ್ನ ಪೂರೈಕೆ ಮಾಡಲಾಗುತ್ತದೆ ಎಂದರು.

ಆಕ್ಸಿಜನ್ ಉಪಯೋಗ ಮತ್ತು ಆಕ್ಸಿಜನ್ ಸಿಲಿಂಡರ್ ಯಾವ ರೀತಿ ಬಳಕೆ ಮಾಡಬೇಕು? ಬಳಕೆಯ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಬಗ್ಗೆ ಸೋನು ಸೂದ್​ ಚಾರಿಟೇಬಲ್ ಟ್ರಸ್ಟ್​ನ ಸದಸ್ಯರು ಸ್ಥಳದಲ್ಲಿಯೇ ತರಬೇತಿ ನೀಡಿದರು.

ಕ್ಷಿಪ್ರ ಆಮ್ಲಜನಕ ಕೇಂದ್ರದ ಸಹಾಯವಾಣಿ ಸಂ: 7069999961 ಗೆ ಸಂಪರ್ಕಿಸಿ ತುರ್ತು ಅವಶ್ಯಕತೆ ಇರುವವರು ಆಕ್ಸಿಜನ್ ಪಡೆಯಬಹುದಾಗಿದೆ.

ABOUT THE AUTHOR

...view details