ಕರ್ನಾಟಕ

karnataka

ETV Bharat / city

ಭಾಷಣ ಸಾಕು, ಪರಿಹಾರ ಬೇಕು: ಹೊಸಪೇಟೆಯಲ್ಲಿ ಮನೆ ಎದುರು ಕುಟುಂಬದ ಪ್ರತಿಭಟನೆ! - protests in front of house in Hospet

ಲಾಕ್​ಡೌನ್​ನಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಧಾನಮಂತ್ರಿ ಮೇಲಿಟ್ಟಿದ್ದ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ ಎಂದು ಕುಟುಂಬವೊಂದು ಮನೆ ಮುಂದೆ ಪ್ರತಿಭಟನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

protests in front of house in Hospet
ಭಾಷಣ ಸಾಕು ಪರಿಹಾರಬೇಕು, ಹೊಸಪೇಟೆಯಲ್ಲಿ ಮನೆ ಎದುರು ಪ್ರತಿಭಟನೆ..!

By

Published : Apr 21, 2020, 7:40 PM IST

ಹೊಸಪೇಟೆ: ಲಾಕ್​ಡೌನ್​ನಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಧಾನಮಂತ್ರಿ ಮೇಲಿಟ್ಟಿದ್ದ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ ಎಂದು ಕುಟುಂಬವೊಂದು ಮನೆ ಮುಂದೆ ಪ್ರತಿಭಟನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಚಿತ್ತವಾಡಿಗಿಯಲ್ಲಿ ಇಂದು ಎಸ್​ಎಫ್​ಐ ಸಂಘಟನೆ ತಾಲೂಕು ಅಧ್ಯಕ್ಷರ ಮನೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣವನ್ನು ನಾವೆಲ್ಲಾ ಕೇಳಿದ್ದೇವೆ. ಆದ್ರೆ ಅವರ ಭಾಷಣದಿಂದ ಜನಸಾಮಾನ್ಯರ ಬದುಕಿನ ಬಂಡಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಅವರು ಬಡವರಿಗೆ, ಅಲೆಮಾರಿ ಜನಾಂಗದವರಿಗೆ, ಬೀದಿಬದಿಯ ವ್ಯಾಪಾರಿಗಳಿಗೆ ಪರಿಹಾರ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು.

ಆದ್ರೆ ಅವರು ಮನೆಯಲ್ಲಿರಿ ಎಂದು ಹೇಳುತ್ತಾರೆ. ದೀಪ ಹಚ್ಚಿ ಗಂಟೆ ಬಾರಿಸಿ ಎಂದು ಸಂದೇಶ ನೀಡುತ್ತಾರೆ. ಇಂತಹ ಮಾತುಗಳಿಂದ ಸಾರ್ವಜನಿಕ ನೋವು ಪರಿಹಾರವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಎಲ್ಲಾ ಶೈಕ್ಷಣಿಕ ಶುಲ್ಕವನ್ನು ಮನ್ನಾ ಮಾಡಬೇಕು ಮತ್ತು ಈ ವರ್ಷದ ದಾಖಲಾತಿ ಶುಲ್ಕಗಳಲ್ಲಿ ವಿನಾಯಿತಿ ನೀಡಬೇಕು.

ಲಾಕ್​ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕ ಭರಿಸಬಾರದು. ವಿಶೇಷವಾಗಿ ಬಾಡಿಗೆ ಮನೆಯಲ್ಲಿದ್ದು, ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಬಾಡಿಗೆ ಪಾವತಿಸಬೇಕು. ನಕಲಿ ಸುದ್ದಿ ಪ್ರಸಾರ ಮಾಡುವ ಮಾಧ್ಯಮದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.

For All Latest Updates

TAGGED:

ABOUT THE AUTHOR

...view details