ಕರ್ನಾಟಕ

karnataka

ETV Bharat / city

ಬಳ್ಳಾರಿ ಹಾಗೂ ಬೀದರ್​​ನಲ್ಲಿ ಪೊಲೀಸ್​​ ಹುತಾತ್ಮ ದಿನಾಚರಣೆ

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗಣಿ ನಗರಿ ಬಳ್ಳಾರಿ ಹಾಗೂ ಬೀದರ್​ನಲ್ಲಿ  ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಗಣಿ ನಾಡಿನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ

By

Published : Oct 21, 2019, 12:54 PM IST

ಬಳ್ಳಾರಿ/ ಬೀದರ್​: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗಣಿನಗರಿ ಬಳ್ಳಾರಿ ಹಾಗೂ ಬೀದರ್​ನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಬಳ್ಳಾರಿ ಹಾಗೂ ಬೀದರ್​ನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ
ಬಳ್ಳಾರಿ ಹಾಗೂ ಬೀದರ್​ನಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ

ಬಳ್ಳಾರಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿಂದು ಬೆಳಗ್ಗೆ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಬಳ್ಳಾರಿ ವಲಯ ಐಜಿಪಿ ಪ್ರೊ. ಎಂ.ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಸೇರಿದಂತೆ ಇತರೆ ಗಣ್ಯರು ಕಪ್ಪು ಪಟ್ಟಿ ಹಾಕಿಕೊಂಡು ಹುತಾತ್ಮರಿಗೆ ನಮನ ಸಲ್ಲಿಸಿದರು. ಬಳಿಕ ಬಳ್ಳಾರಿ ವಲಯ ಐಜಿಪಿ ಪ್ರೊ. ಎಂ.ನಂಜುಂಡಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಇವೆರಡನ್ನು ದೊಡ್ಡ ಹಬ್ಬಗಳೆಂದು ನಾವು ಭಾವಿಸಿದ್ದೇವೆ. ಪೊಲೀಸ್ ಹುತಾತ್ಮ ಹಾಗೂ ಪೊಲೀಸ್ ಧ್ವಜಾರೋಹಣ ದಿನಾಚರಣೆಯನ್ನು ಆಚರಿಸಲಾಗುತ್ತೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಪ್ತಸಕ್ತ ಸಾಲಿನಲ್ಲಿ ಸೇವೆಯಲ್ಲಿದ್ದಾಗ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಎಸ್ಪಿಗಳಾದ ಲಾವಣ್ಯ, ಮರಿಯಂ ಜಾರ್ಜ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಆದಾಯ ತೆರಿಗೆ ಇಲಾಖೆ ಎಸಿ ಆನಂದ, ಡಿಎಆರ್ ಡಿವೈಎಸ್ಪಿ ಸಿದ್ಧನಗೌಡ ಪಾಟೀಲ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಬೀದರ್​ನಲ್ಲೂ ಪೊಲೀಸ್​ ಹುತಾತ್ಮ ದಿನಾಚರಣೆ: ಸೇವಾನಿರತ ಪೊಲೀಸರ ಬಲಿದಾನ ಹಾಗೂ ತ್ಯಾಗವನ್ನು ಸ್ಮರಿಸಿ ಜಿಲ್ಲಾ ಪೊಲೀಸರಿಂದ ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಯಿತು.

ನಗರದ ಪೊಲೀಸ್ ಕವಾಯತು ಮೈದಾನದ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ‌. ಹೆಚ್‌.ಆರ್.ಮಹದೇವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಬೀದರ್ ವಾಯು ಸೇನಾ ತರಬೇತಿ ಕೇಂದ್ರದ ಮನೋಜ್​​ ಕುಮಾರ ಮಿಶ್ರಾ ಸೇರಿದಂತೆ ಹಲವು ಗಣ್ಯರು ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ, ಕುಟುಂಬದಿಂದ ದೂರ ಉಳಿದು ಹಗಲು ರಾತ್ರಿ ಎನ್ನದೆ ಸಮಾಜದ ರಕ್ಷಣೆಗೆ ನಿಲ್ಲುವ ಪೊಲೀಸರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ABOUT THE AUTHOR

...view details