ಬಳ್ಳಾರಿ:ವ್ಯಕ್ತಿಯೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಘೋಷ ವಾಕ್ಯ ಮುದ್ರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಹೊಸಪೇಟೆ: ಲಗ್ನ ಪತ್ರಿಕೆಯಲ್ಲಿ 'ಬೇಟಿ ಬಚಾವೋ ಬೇಟಿ ಪಢಾವೋ' ಸಂದೇಶ
ವ್ಯಕ್ತಿಯೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಘೋಷ ವಾಕ್ಯ ಮುದ್ರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಮುದ್ರಿಸಿರೋದನ್ನ ನೋಡಿದ್ದೇವೆ. ಕೆಲವರು ತಮ್ಮ ಶ್ರೀಮಂತಿಕೆಯನ್ನು ತೋರಿಸುವ ಸಲುವಾಗಿ ಡಿಜಿಟಲೀಕರಣದ ಸ್ಪರ್ಶ ನೀಡಿ, ಲಕ್ಷಾಂತರ ರೂ.ಗಳ ಲಗ್ನ ಪತ್ರಿಕೆಗಳನ್ನು ಮುದ್ರಿಸುತ್ತಾರೆ. ಆದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬುವರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ 'ಬೇಟಿ ಬಚಾವೋ ಬೇಟಿ ಪಢಾವೋ' ಎಂಬ ಸಂದೇಶ ಪ್ರಿಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಜನವರಿ 27ರಂದು ಅನುಷಾ ಹಾಗೂ ನಿತಿನ್ ಎಂಬುವವರ ವಿವಾಹ ನಡೆಯಲಿದ್ದು, ದಂಪತಿ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ 'ಬೇಟಿ ಬಚಾವೋ ಬೇಟಿ ಪಢಾವೋ' ಸಂದೇಶವನ್ನು ಪ್ರಿಂಟ್ ಮಾಡಿಸಿದ್ದಾರೆ. ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ದಂಪತಿಗೆ ಹೆಣ್ಣುಮಕ್ಕಳ ಮೇಲೆ ತುಂಬಾ ಪ್ರೀತಿ ಇರುವ ಕಾರಣ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳಸಬೇಕು ಎನ್ನುವ ಉದ್ದೇಶದಿಂದ ಲಗ್ನ ಪತ್ರಿಕೆಯಲ್ಲಿ ಈ ರೀತಿಯಾಗಿ ಪ್ರಿಂಟ್ ಮಾಡಿಸಿದ್ದಾರಂತೆ.
TAGGED:
ಬೇಟಿ ಬಚಾವೋ ಬೇಟಿ ಪಡಾವೋ