ಕರ್ನಾಟಕ

karnataka

ETV Bharat / city

ಬಳ್ಳಾರಿ: ಈ ವಾರ್ಡ್​ನಿಂದ ಆ ವಾರ್ಡ್​ಗೆ ಶಿಫ್ಟ್ ಆಯ್ತು ಮತದಾರರ ಪಟ್ಟಿ - ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ವಾರ್ಡ್​ನಿಂದ 39ನೇ ವಾರ್ಡ್​ಗೆ ಸರಿಸುಮಾರು 300 ಕ್ಕೂ ಅಧಿಕ ಮತದಾರರನ್ನು ಶಿಫ್ಟ್ ಮಾಡಲಾಗಿದ್ದು, ಕಮ್ಮ ಸಮುದಾಯದ ಮತದಾರರನ್ನೇ ಇಲ್ಲಿ ಟಾರ್ಗೆಟ್ ಮಾಡಿ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ ಆರೋಪಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ  ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ

By

Published : Apr 15, 2021, 9:16 AM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 34ನೇ ವಾರ್ಡ್​ನಿಂದ 39ನೇ ವಾರ್ಡ್​ಗೆ ಸುಮಾರು 300 ಕ್ಕೂ ಅಧಿಕ ಮತದಾರರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ರಾಜಕೀಯ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಯುವ ಮುಖಂಡ ಕುಡಿತಿನಿ ಶ್ರೀನಿವಾಸ ಮಾತನಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೀಗೆ ಶಿಫ್ಟ್ ಮಾಡಲಾದ ಎಲ್ಲಾ ಮತದಾರರು ಸದ್ಯಕ್ಕೆ ನೆಲೆಸಿರುವುದು 34ನೇ ವಾರ್ಡ್​ನಲ್ಲಿ. ಆದರೆ ಅವರ ಮತದಾನ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿರೋದು ಮಾತ್ರ 39ನೇ ವಾರ್ಡ್​ನಲ್ಲಿ. ಹಾಗಾದ್ರೆ ಮತ ಚಲಾವಣೆಗೋಸ್ಕರವೇ ಅಲ್ಲಿಗೆ ಹೋಗಬೇಕಾ?, ಈ ವಾರ್ಡ್​ನ ಅಭಿವೃದ್ಧಿ ಕಾರ್ಯಗಳಿಗೆ ಆ ವಾರ್ಡ್​ನ ಸದಸ್ಯರು ಯಾವ ರೀತಿಯ ಸ್ಪಂದನೆ ಮಾಡುತ್ತಾರೆ ಎಂಬ ಅನುಮಾನ ಮೂಡಿದೆ. ಕೇವಲ ಕಮ್ಮ ಸಮುದಾಯದ ಮತದಾರರನ್ನೇ ಇಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.

ಈ ಕುರಿತು‌ ಜಿಲ್ಲಾಧಿಕಾರಿ ಪವನಕುಮಾರ್​ ಮಾಲಪಾಟಿ ಅವರಿಗೆ ಮಾಹಿತಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕುಡಿತಿನಿ ಶ್ರೀನಿವಾಸ ಆಗ್ರಹಿಸಿದರು.

ABOUT THE AUTHOR

...view details