ಕರ್ನಾಟಕ

karnataka

ETV Bharat / city

ಬಳ್ಳಾರಿ ಜಿಲ್ಲೆಯ ಆರು ಪ್ರಮುಖ ಜಾತ್ರೆಗಳಿಗೆ ಹೊರ ಜಿಲ್ಲೆಯ ಭಕ್ತರಿಗೆ ನಿರ್ಬಂಧ: ಕಾರಣ? - District Collector Pavanakumar Malapati

ಗಣಿ ಜಿಲ್ಲೆಯಲ್ಲಿ ನಡೆಯಲಿರುವ ಪ್ರಮುಖ 6 ಜಾತ್ರೆಗಳಿಗೆ ಹೊರಗಿನ ಭಕ್ತರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿ ಬಳ್ಳಾರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

District Collector Pavanakumar Malapati
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ

By

Published : Feb 24, 2021, 8:01 AM IST

ಬಳ್ಳಾರಿ:ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ 6 ಜಾತ್ರೆಗಳಿಗೆ ಹೊರಗಿನ ಭಕ್ತರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.

ಗಣಿ ಜಿಲ್ಲೆಯ ಆರು ಪ್ರಮುಖ ಜಾತ್ರೆಗಳಿಗೆ ಹೊರಗಿನ ಭಕ್ತರಿಗೆ ನಿರ್ಬಂಧ

ಫೆಬ್ರವರಿ 27ರಂದು ನಡೆಯುವ ನಗರದ ಕೋಟೆ ಮಲ್ಲೇಶ್ವರ ಜಾತ್ರೆ, ಸಂಡೂರು ತಾಲೂಕಿನ ಗೆಣಗಿಕಟ್ಟೆ ಶ್ರೀ ಆಂಜನೇಯ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ, ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಶ್ರೀ ಉತ್ತಿನ ಯಲ್ಲಮ್ಮದೇವಿ ರಥೋತ್ಸವ, ಹರಪನಹಳ್ಳಿ ತಾಲೂಕಿನ ಉಚ್ಚಂಗಿ ದುರ್ಗ ಗ್ರಾಮದ ಉಸ್ತುವಾಂಬ ದೇವರ ಜಾತ್ರಾ ಮಹೋತ್ಸವಕ್ಕೆ ಹೊರಗಿನ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ಓದಿ:ಅತ್ಯಾಧುನಿಕ ಉಪಕರಣ ಪಡೆದ ದಕ್ಷಿಣ ಏಷ್ಯಾದ ಮೊಟ್ಟ ಮೊದಲ ವಿಮಾನ ನಿಲ್ದಾಣ ಕೆಐಎಎಲ್!

ಜೊತೆಗೆ ಫೆ. 23ರಂದು ನಡೆಯುವ ಹೂವಿನ ಹಡಗಲಿ ಮಾನ್ಯರಮಸಲವಾಡ ಗ್ರಾಮದ ಶ್ರೀ ವೀರಭದ್ರಶ್ವೇಶರ ಜಾತ್ರಾ ಮಹೋತ್ಸವ, ಮಾ. 5ರಂದು ನಡೆಯುವ ಬಳ್ಳಾರಿ ತಾಲೂಕಿನ ಮೋಕಾ ಶ್ರೀ ಮಲ್ಲೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೂ ಹೊರಗಿನಿಂದ ಭಕ್ತರು ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details