ಕರ್ನಾಟಕ

karnataka

ETV Bharat / city

ದ್ವಿತೀಯ PU Result: ಕೊಟ್ಟೂರು ಕಾಲೇಜಿನ 6 ವಿದ್ಯಾರ್ಥಿಗಳಿಗೆ ಔಟ್​ ಆಫ್​ ಔಟ್​ - PuC 2nd year result out

ವಿಜಯನಗರ ಜಿಲ್ಲೆಯ ಕೊಟ್ಟೂರು ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 600ಕ್ಕೆ 600 ಅಂಕ ಪಡೆದಿದ್ದಾರೆ.

PUC result
ಕೊಟ್ಟೂರು ಕಾಲೇಜಿನ 6 ವಿದ್ಯಾರ್ಥಿಗಳಿಗೆ ಔಟ್​ ಆಫ್​ ಔಟ್​

By

Published : Jul 21, 2021, 7:03 AM IST

Updated : Jul 21, 2021, 8:38 AM IST

ಹೊಸಪೇಟೆ (ವಿಜಯನಗರ):ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ಕೊಟ್ಟೂರು ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ.

ಕೊಟ್ಟೂರು ಕಾಲೇಜಿನ 6 ವಿದ್ಯಾರ್ಥಿಗಳಿಗೆ ಔಟ್​ ಆಫ್​ ಔಟ್​

ವಿಜ್ಞಾನ ವಿಭಾಗದಲ್ಲಿ ಭರತ್ ಕುಮಾರ ಕೆ.ಎಸ್ ಹಾಗೂ ಬೂದನೂರ ಪ್ರೇಮ, ಕಲಾ ವಿಭಾಗದಲ್ಲಿ ಶಿಲ್ಪಾ ತಿಮ್ಮಲಾಪುರ, ಸುಣಗಾರ ಚನ್ನಮ್ಮ, ಸಣ್ಣ ಹಪ್ಪಳ ಸಹನ ಹಾಗೂ ಬಿ.ಪಿ.ರಂಜಿತ 600ಕ್ಕೆ 600 ಅಂಕ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಬಳ್ಳಾರಿ ಜಿಲ್ಲೆಗೆ ಸ್ವತಂತ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಟಾಪರ್

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಬಳ್ಳಾರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ವಂದನಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆಯುವ ಮೂಲಕ ಇಡೀ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ಬ್ಯುಜಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸಾಮಾನ್ಯ ಗಣಿತ ವಿಷಯಗಳಲ್ಲಿ ಕ್ರಮವಾಗಿ 100 ಅಂಕಗಳನ್ನ ಪಡೆದಿದ್ದಾಳೆ.

ಇದನ್ನೂ ಓದಿ:BSY ಬೇಡ ಅಂದ್ರು ದೆಹಲಿಗೆ ತೆರಳಿದ ರೇಣುಕಾಚಾರ್ಯ... ಬಿಜೆಪಿಯಲ್ಲಿ ಸಂಚಲನ!

Last Updated : Jul 21, 2021, 8:38 AM IST

ABOUT THE AUTHOR

...view details