ಹೊಸಪೇಟೆ:ಸಾರಿಗೆ ನೌಕರರ ಮುಷ್ಕರದ ನಡುವೆಯೂ ಏಪ್ರಿಲ್ 7 ರಿಂದ 16 ರವರೆಗೆ ಹೊಸಪೇಟೆ ಘಟಕದಿಂದ 1,113 ಸಾರಿಗೆ ಬಸ್ಗಳು ಕಾರ್ಯಾಚರಣೆ ಮಾಡಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 1,247 ಸಿಬ್ಬಂದಿಗೆ ಒಟ್ಟು 2.13 ಕೋಟಿಯಷ್ಟು ಮಾರ್ಚ್ ವೇತನವನ್ನು ನೀಡಲಾಗಿದೆ. ಮುಷ್ಕರ ಬಿಟ್ಟು ಕರ್ತವ್ಯ ಹಾಜರಾದ 159 ಸಿಬ್ಬಂದಿಗೆ ಎರಡನೇಯ ಹಂತವಾಗಿ 29.39 ಲಕ್ಷ ರೂ. ವೇತನ ಪಾವತಿಸಲಾಗಿದೆ. ಏಪ್ರಿಲ್ 7 ರಿಂದ 16 ರವರೆಗೆ ಹೊಸಪೇಟೆ ಸಾರಿಗೆ ವಿಭಾಗಕ್ಕೆ 3.28 ಲಕ್ಷ ರೂ. ನಷ್ಟವಾಗಿದೆ ಎಂದರು.