ಕರ್ನಾಟಕ

karnataka

ETV Bharat / city

ಜೆಸಿಐ ಸಂಸ್ಥೆ ವತಿಯಿಂದ ಆನ್​ಲೈನ್ ಯೋಗಾಭ್ಯಾಸ ಕಾರ್ಯಕ್ರಮ ಆಯೋಜನೆ - ಶ್ರೀಶೈಲ ಮಲ್ಲಿಕಾರ್ಜುನ ಮಠ

ಜೆಸಿಐ ಸಂಸ್ಥೆಯು ಝೂಮ್ ಆ್ಯಪ್ ಮೂಲಕ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಯೋಗಪಟುಗಳು ತಮ್ಮ ಮನೆಯಿಂದಲೇ ನಾನಾ ಭಂಗಿಗಳನ್ನು ಪ್ರದರ್ಶಿಸಿದರು.

Bellary
ಜೆಸಿಐ ಸಂಸ್ಥೆ ವತಿಯಿಂದ ಆನ್​ಲೈನ್ ಯೋಗಾಭ್ಯಾಸ ಕಾರ್ಯಕ್ರಮ ಆಯೋಜನೆ

By

Published : Jun 21, 2021, 11:06 AM IST

ಬಳ್ಳಾರಿ:ಜೆಸಿಐ ಸಂಸ್ಥೆಯು ಝೂಮ್ ಆ್ಯಪ್ ಮೂಲಕ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 50ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು.

ಯೋಗಪಟುಗಳು ತಮ್ಮ ಮನೆಯಿಂದಲೇ ನಾನಾ ಭಂಗಿಗಳನ್ನು ಪ್ರದರ್ಶಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಳ್ಳಾರಿಯ ಸರ್ಕಾರಿ ಶಾಲೆ ಶಿಕ್ಷಕ ಮಸೂದಿಪುರ ಪಂಪನಗೌಡ, ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನೋಲ್ಲಾಸ ಹೆಚ್ಚಲಿದೆ. ಯೋಗದಿಂದ ನೆಮ್ಮದಿಯ ಜೀವನ ಸಾಗಿಸಬಹುದು. ಮಹಾಮಾರಿ ಕೊರೊನಾ ಸೋಂಕನ್ನು ಕೂಡ ತಡೆಗಟ್ಟಬಹುದು ಎಂದರು.

ಜೆಸಿಐ ಸಂಸ್ಥೆ ವತಿಯಿಂದ ಆನ್​ಲೈನ್ ಯೋಗಾಭ್ಯಾಸ ಕಾರ್ಯಕ್ರಮ ಆಯೋಜನೆ

ನಿಯಮ ಉಲ್ಲಂಘನೆ

ಬಳ್ಳಾರಿಯ ಗುಗ್ಗರಹಟ್ಟಿ ವ್ಯಾಪ್ತಿಯಲ್ಲಿ ಬರುವ ಶ್ರೀಶೈಲ ಮಲ್ಲಿಕಾರ್ಜುನ ಮಠದ ಆವರಣದಲ್ಲಿಂದು ಬಿಜೆಪಿ ನಗರ ಘಟಕದಿಂದ ಆಯೋಜಿಸಿದ್ದ ಯೋಗಾಭ್ಯಾಸ ಶಿಬಿರದಲ್ಲಿ ಎಸ್​​​​ಒಪಿ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾಮೂಹಿಕ ಯೋಗಾಭ್ಯಾಸ ನಿಷೇಧಿಸಿ ಕೇಂದ್ರಸರ್ಕಾರ ಆದೇಶ ಹೊರಡಿಸಿದೆ. ಆದರೂ ಕೂಡ ಬಿಜೆಪಿ ನಗರ ಘಟಕದ ಸದಸ್ಯರು ನಿಯಮ ಉಲ್ಲಂಘಿಸಿ, ಸಾಮೂಹಿಕ ಯೋಗಾಭ್ಯಾಸ ಮಾಡಿದ್ದಾರೆ.

ಬಿಜೆಪಿ ನಗರ ಘಟಕದ ಸದಸ್ಯರಿಂದ ಸಾಮೂಹಿಕ ಯೋಗಾಭ್ಯಾಸ

ಇದನ್ನೂ ಓದಿ:'ಜಲಯೋಗ'ದ ಮೂಲಕ ಆರೋಗ್ಯ ಸಂದೇಶ ಸಾರುತ್ತಿರುವ ಕಲಬುರಗಿಯ ಯೋಗಪಟು

ABOUT THE AUTHOR

...view details