ಬಳ್ಳಾರಿ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಕೌಲ್ ಬಜಾರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 10.50 ಲಕ್ಷ ರೂ. ಮೌಲ್ಯದ 225 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್: 10.50 ಲಕ್ಷ ಮೌಲ್ಯದ ಚಿನ್ನಾಭರಣ ವಶ - Bellary crime news
ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನ ಬಂಧಿಸುವಲ್ಲಿ ಕೌಲ್ ಬಜಾರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
![ಕಳ್ಳತನ ಪ್ರಕರಣದ ಆರೋಪಿ ಅರೆಸ್ಟ್: 10.50 ಲಕ್ಷ ಮೌಲ್ಯದ ಚಿನ್ನಾಭರಣ ವಶ Arrest](https://etvbharatimages.akamaized.net/etvbharat/prod-images/768-512-09:37:28:1593230848-kn-01-bly-270620-crime-news-ka10007-27062020080957-2706f-1593225597-228.jpg)
Arrest
ಯಾಳ್ಪಿ ಗ್ರಾಮದ ಓಬಲೇಶ್ ಬಂಧಿತ ಆರೋಪಿ. ಕೌಲ್ ಬಜಾರ್ ಪ್ರದೇಶದ ಬಾಬು ಚೌಕ್ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆ.ಎಚ್.ಬಿ ಕಾಲೋನಿ, ಜಾಗೃತಿ ನಗರ, ಕೆ.ಇ.ಬಿ ಕಚೇರಿ ಎದುರುಗಡೆ, ರೇಡಿಯೋ ಪಾರ್ಕ್ ಪ್ರದೇಶ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ಸುಭಾಷ್ ಚಂದ್ರ, ಪಿಎಸ್ಐ ರಘು , ವಿಜಯಲಕ್ಷ್ಮಿ, ವಲಿಬಾಷಾ, ಕೆ.ನಾಗರಾಜ್, ಅನ್ವರ್ ಬಾಷಾ, ರಾಮದಾಸ್, ಕೆ.ಎನ್ ಸೋಮಪ್ಪ, ಎಚ್.ರಾಮಲಿಂಗಪ್ಪ, ಎಂ. ರಾಜ, ಬಿ.ಸಿದ್ದೇಶ್ ಪಾಲ್ಗೊಂಡಿದ್ದರು.