ಬಳ್ಳಾರಿ:ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಿನ್ನೆ ರಾತ್ರಿಯಿಂದ ಮಳೆ ಸುರಿಯುತ್ತಿದೆ.
ಬಳ್ಳಾರಿ: ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಜಿಟಿಜಿಟಿ ಮಳೆ ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನ ಹಡಗಲಿ, ಸಂಡೂರು, ಕೊಟ್ಟೂರು, ಸಿರುಗುಪ್ಪ, ಕುರುಗೋಡು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಹೀಗಾಗಿ, ಗಣಿನಾಡಿನ ಐತಿಹಾಸಿಕ ಕೋಟೆಯೂ ಮಂಜಿನಿಂದ ಆವರಿಸಿದೆ.
ತಾಲೂಕುವಾರು ಮಳೆ ವಿವರ:
ಬಳ್ಳಾರಿ 4.4 ಎಂಎಂ, ಕುರುಗೋಡು 8.2 ಎಂಎಂ, ಹೂವಿನ ಹಡಗಲಿ 7.2 ಎಂಎಂ, ಹಗರಿಬೊಮ್ಮನಹಳ್ಳಿ 5.2 ಎಂಎಂ, ಹರಪನಹಳ್ಳಿ 3.4 ಎಂಎಂ, ಹೊಸಪೇಟೆ 7.2 ಎಂಎಂ, ಕಂಪ್ಲಿ 67.4 ಎಂಎಂ, ಕೂಡ್ಲಿಗಿ 5.2 ಎಂಎಂ, ಸಂಡೂರು 5.6 ಎಂಎಂ ಹಾಗೂ ಸಿರುಗುಪ್ಪದಲ್ಲಿ 5.5 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.