ಬಳ್ಳಾರಿ:ಪಕ್ಷಾಂತರ ಪಿಡುಗನ್ನು ತೊಲಗಿಸಲು ಜನತಾ ನ್ಯಾಯಾಲಯ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷಾಂತರ ಪಿಡುಗು ತೊಲಗಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು: ಮುಖ್ಯಮಂತ್ರಿ ಚಂದ್ರು - ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ
ಪಕ್ಷಾಂತರ ಪಿಡುಗನ್ನು ತೊಲಗಿಸಲು ಜನತಾ ನ್ಯಾಯಾಲಯ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷಾಂತರದ ಪಿಡುಗು ತೊಲಗಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು: ಮುಖ್ಯಮಂತ್ರಿ ಚಂದ್ರು ಮನವಿ
ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿದೆಯಾದ್ರೂ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದು ಸರಿಯಲ್ಲ. ಅನರ್ಹರು ಚುನಾವಣೆಗೆ ನಿಲ್ಲಲು ಹೇಗೆ ಸಾಧ್ಯ? ಈ ಕುರಿತು ನನಗೆ ಅಸಮಾಧಾನವಿದೆ ಎಂದರು.
ಈ ದೇಶದ ಪ್ರಾದೇಶಿಕ ಪಕ್ಷಗಳು ದರೋಡೆ ಮಾಡುತ್ತಿವೆ. ಜೆಡಿಎಸ್ ಮತ್ತೆ ಹೊಂದಾಣಿಕೆ ಬಗ್ಗೆ ಮಾತನಾಡುತ್ತಿದ್ದು, ಅದಕ್ಕೆ ವ್ಯಾಪರದ ಮನಸ್ಥಿತಿ ಇದೆ. ಅಲ್ಲದೇ ಕೋಮುವಾದಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
TAGGED:
ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ