ಬಳ್ಳಾರಿ:ಜಿಲ್ಲೆಯ ಸಿರಗುಪ್ಪದಲ್ಲಿ ಅನಿಷ್ಠ ದೇವದಾಸಿ ಪದ್ಧತಿ ಜೀವಂತವಾಗಿದೆ. ಇಲ್ಲಿನ ಹೆರಕಲ್ಲಿನ ನವಗ್ರಾಮದ ದೇವದಾಸಿ ಮಹಿಳೆಯೊಬ್ಬಳು ತನ್ನ ಸ್ವಂತ ಮಗಳನ್ನೇ ಈ ಅನಿಷ್ಠ ಪದ್ಧತಿಗೆ ದೂಡಲು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಸಿರಗುಪ್ಪದಲ್ಲಿ ದೇವದಾಸಿ ಪದ್ಧತಿ ಇನ್ನೂ ಜೀವಂತ... ತಾಯಿಯೇ ಮಗಳಿಗೆ ನರಕ ತೋರಲು ಅಣಿ - Devadasi System in Bellary
ದೇವದಾಸಿ ಮಹಿಳೆಯೊಬ್ಬರು ತನ್ನ ಮಗಳಿಗೆ ಅನಿಷ್ಠ ದೇವದಾಸಿ ಪದ್ಧತಿಗೆ ದೂಡುವ ಹುನ್ನಾರ ನಡೆಸಿದ್ದರ ಕುರಿತು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕು ಸಿಡಿಪಿಒ ರಾಮಕೃಷ್ಣ ನಾಯ್ಕ ಅವರಿಗೆ ತಿಳಿದಿದ್ದು, ಕೂಡಲೇ ಸಂಬಂಧಿಸಿದ ಗ್ರಾಮಕ್ಕೆ ತೆರಳಿ ದೇವದಾಸಿ ಪದ್ಧತಿ ತಡೆದಿದ್ದಾರೆ.
ನಿನ್ನೆ ರಾತ್ರೋರಾತ್ರಿ ದೇವದಾಸಿ ಮಹಿಳೆಯೊರ್ವಳು ತನ್ನ ಮಗಳಿಗೆ ಅನಿಷ್ಠ ಪದ್ಧತಿ ಕಡೆಗೆ ದೂಡುವ ಹುನ್ನಾರ ನಡೆಸಿದ್ದರ ಕುರಿತು ಜಿಲ್ಲೆಯ ಸಿರಗುಪ್ಪ ತಾಲೂಕು ಸಿಡಿಪಿಒ ರಾಮಕೃಷ್ಣ ನಾಯ್ಕ ಅವರಿಗೆ ತಿಳಿದಿದ್ದು, ಕೂಡಲೇ ಹೆರಕಲ್ಲು ಗ್ರಾಮಕ್ಕೆ ತೆರಳಿ ದೇವದಾಸಿ ಪದ್ಧತಿ ತಡೆಯಲು ಮುಂದಾಗಿದ್ದಾರೆ.
ಇದಾದ ಬಳಿಕ, ದೇವದಾಸಿ ಮಹಿಳೆಗೆ ಕಾನೂನಿನ ಜಾಗೃತಿ ಮೂಡಿಸಿದ್ದಲ್ಲದೇ, ಕಾನೂನಾತ್ಮಕ ತೊಡಕು ಎದುರಿಸುವುದರ ಕುರಿತು ಅರಿವು ಮೂಡಿಸಿದ್ದಾರೆ. ಹೆರಕಲ್ಲು ಗ್ರಾಮದ ನಿವಾಸಿ ಮಾರೆಮ್ಮ ಅವರ ಮನೆಗೆ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನ ಕಳಿಸಿ, ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಇನ್ಮುಂದೆ ಮಗುವಿಗೆ ಈ ರೀತಿಯ ಒತ್ತಡ ಹೇರಿದ್ರೆ ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.