ಕರ್ನಾಟಕ

karnataka

ETV Bharat / city

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದವರೇ ಹೆಚ್ಚು ಬಲಿ

ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಗಳಲ್ಲಿ ಈವರೆಗೆ 1,100 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮೊದಲನೇ ಅಲೆಯಲ್ಲಿ ಕೊರೊನಾ ಜೊತೆಗೆ ಬಿಪಿ, ಶುಗರ್, ಕ್ಯಾನ್ಸರ್, ಅಸ್ತಮಾ ಸೇರಿ ನಾನಾ ರೋಗಗಳಿದ್ದ 385 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ 212 ನಾಗರಿಕರು ಬಲಿಯಾಗಿದ್ದಾರೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲಿದ 276 ಹಾಗು ಸೋಂಕಿನ ಜೊತೆಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ 217 ಮಂದಿ ಮೃತಪಟ್ಟಿದ್ದಾರೆ.

Bellary
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದವರೇ ಹೆಚ್ಚು ಬಲಿ

By

Published : May 27, 2021, 2:24 PM IST

ಬಳ್ಳಾರಿ:ಗಣಿನಾಡು ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಜೊತೆಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದವರೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಉಭಯ ಜಿಲ್ಲೆಗಳಲ್ಲಿ ಈವರೆಗೆ 1,100 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮೊದಲನೇ ಅಲೆಯಲ್ಲಿ ಕೊರೊನಾ ಜೊತೆಗೆ ಬಿಪಿ, ಶುಗರ್, ಕ್ಯಾನ್ಸರ್, ಅಸ್ತಮಾ ಸೇರಿದಂತೆ ನಾನಾ ರೋಗಗಳಿದ್ದ 385 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ 212 ನಾಗರಿಕರು ಬಲಿಯಾಗಿದ್ದಾರೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲಿದ 276 ಹಾಗು ಸೋಂಕಿನ ಜೊತೆಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ 217 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಅಲೆಯಲ್ಲಿ 40 ವರ್ಷದೊಳಗಿನವರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಲಾಕ್‍ಡೌನ್ ಘೋಷಿಸಿರುವುದರಿಂದ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗುತ್ತಲಿದೆ ಅನಿಸಿದೆಯಾದರೂ ವಾಸ್ತವವಾಗಿ ಸೋಂಕಿತರ ಗುರುತಿಸುವಿಕೆ ಪ್ರಮಾಣ ಜಿಲ್ಲಾಡಳಿತ ಕಡಿಮೆ ಮಾಡಿದೆ. ಈ ಹಿಂದೆ ದಿನಕ್ಕೆ ಅಂದಾಜು 4 ರಿಂದ 5 ಸಾವಿರ ಮಂದಿಯನ್ನ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ವರದಿಯಲ್ಲಿ 1,500ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಟೆಸ್ಟಿಂಗ್ ಪ್ರಮಾಣವನ್ನ ಕೇವಲ 2,500 ರಿಂದ 3,000ಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ, ಸೋಂಕಿತರ ಸಂಖ್ಯೆಯ ಪ್ರಮಾಣ ಕಡಿಮೆ ಅನಿಸುತ್ತಿದೆ.

24 ಗಂಟೆಗಳಲ್ಲಿ 331 ಜನರ ದುರ್ಮರಣ

ಕೊರೊನಾ ಎರಡೂ ಅಲೆಗಳಲ್ಲೂ ಉಭಯ ಜಿಲ್ಲೆಗಳಲ್ಲಿ ಒಟ್ಟು 331 ಸೋಂಕಿತರು ಚಿಕಿತ್ಸೆಗೆ ದಾಖಲಾದ 24 ಗಂಟೆಗಳಲ್ಲಿಯೇ ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 203 ಮಂದಿ ಮೃತಪಟ್ಟರೆ, ಎರಡನೇ ಅಲೆಯಲ್ಲಿ 128 ಜನರು ಅಸುನೀಗಿದ್ದಾರೆ. ಇನ್ನು ಚಿಕಿತ್ಸೆಗೆ ದಾಖಲಾದ 48 ಗಂಟೆಗಳಲ್ಲಿ 143, 72 ಗಂಟೆಗಳಲ್ಲಿ 131 ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಮೊದಲ ಅಲೆಯಲ್ಲಿ ಕೋವಿಡ್ ಜೊತೆ ನಾನಾ ರೋಗಗಳಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದರು. ಆದರೆ, ಎರಡನೇ ಅಲೆಯ ನೇರವಾಗಿ ಸೋಂಕಿಗೆ ಗುರಿಯಾದವರು ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸದ್ಯ ಸೋಂಕಿನ ಪ್ರಮಾಣ ತಗ್ಗುತ್ತಿದೆಯಾದರೂ ಜನತೆ ಎಚ್ಚರಿಕೆಯಿಂದ ಇರೋದು ಒಳಿತು ಎಂದು ಡಿಹೆಚ್​ಒ ಡಾ.ಎಚ್.ಎಲ್.ಜನಾರ್ಧನ್ ಸಲಹೆ ತಿಳಿಸಿದ್ದಾರೆ.

ಇದನ್ನೂ ಓದಿ:ಸ್ಮಶಾನದಲ್ಲಿ ಊಟ ಮಾಡಿ ಮೌಢ್ಯಕ್ಕೆ ಸೆಡ್ಡು ಹೊಡೆದು ಜಾಗೃತಿ ಮೂಡಿಸಿದ ಯುವಕರ ತಂಡ

ABOUT THE AUTHOR

...view details