ವಿಜಯನಗರ: ಕೀಟನಾಶಕ ಸಿಂಪರಣೆ ಮಾಡಿದ ದಾಳಿಂಬೆ ಬೆಳೆ ತಿಂದು 100ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, 30 ಕುರಿಗಳು ಅಸ್ವಸ್ಥಗೊಂಡ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ನಡೆದಿದೆ.
ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು - More than 100 sheep died after eating Insecticide sprayed crops
ಹಂಪಸಾಗರ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪರಣೆಯಾದ ದಾಳಿಂಬೆ ಬೆಳೆ ತಿಂದು 100ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ಇವು ಬನ್ನಿಕಲ್ಲು ಗ್ರಾಮದ ಕರಿಬಸಪ್ಪ, ಟಿ. ಕೊಟ್ರೇಶ್, ಸಿ. ವೀರೇಶ, ಮಂಜುನಾಥ ಕರಿಬಸವ ಸಜ್ಜಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಹಂಪಸಾಗರ ಗ್ರಾಮದ ಬಳಿ ಕುರಿಗಳನ್ನು ಮೇಯಿಸಲು ಕುರಿಗಾಹಿಗಳು ಕರೆದೊಯ್ದಿದ್ದರು. ಈ ವೇಳೆ ಕ್ರಿಮಿನಾಶಕ ಸಿಂಪರಣೆಯಾದ ದಾಳಿಂಬೆ ಬೆಳೆ ತಿಂದಿದ್ದು, 100ಕ್ಕೂ ಹೆಚ್ಚು ಕುರಿಗಳು ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿವೆ. 30 ಕುರಿಗಳು ಅಸ್ವಸ್ಥಗೊಂಡಿದ್ದು, ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ನೂರಾರು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ:ವನ್ಯ ಜೀವಿಗಳನ್ನು ಮನೆಯಲ್ಲಿ ಸಾಕುವುದು ಶಿಕ್ಷಾರ್ಹ ಅಪರಾಧ: ಡಿಸಿಎಫ್ ಕರಿಕಾಳನ್