ಕರ್ನಾಟಕ

karnataka

ETV Bharat / city

ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ದೋಚಿ ಪರಾರಿಯಾದ ಖದೀಮರು! - ಬಳ್ಳಾರಿ ಹಣದ ಮೋಸ

ನಗರದಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಗಳಿಬ್ಬರು 19.90 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

money-double-theft-in-ballary
ಬಳ್ಳಾರಿ ಹಣ ಡಬಲ್ ದಂದೆ

By

Published : Jan 31, 2020, 10:48 AM IST

ಬಳ್ಳಾರಿ: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿ 19.90 ಲಕ್ಷ ದೋಚಿ ಖದೀಮರು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ನಿವಾಸಿ ಲಕ್ಷ್ಮಿ ನಾರಾಯಣ ಎಂಬುವವರಿಗೆ ರಮೇಶ್​ ಮತ್ತು ಸುರೇಶ್​ ಎಂಬ ಅಪರಿಚಿತ ವ್ಯಕ್ತಿಗಳು 2019ರ ಜೂ. 20ರಂದು ಕರೆ ಮಾಡಿ 1 ಲಕ್ಷ ಕೊಟ್ಟರೆ 3 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಅದೇ ರೀತಿ 2019 ಜು. 11, 15ರಂದು ಸ್ನೇಹಿತರೊಂದಿಗೆ ತೆರಳಿ ಪರಿಶೀಲಿಸಿದಾಗ ನಾರಾಯಣ ಅವರ ಬ್ಯಾಂಕ್​ ಖಾತೆಗೆ ಹಣ ಬಂದಿದೆ.

ಇದನ್ನು ನಂಬಿದ ನಾರಾಯಣನಿಗೆ ಮತ್ತೆ ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ 19.90 ಲಕ್ಷ ಪಡೆದಿದ್ದಾರೆ. ನಂತರ 60 ಲಕ್ಷ ಇರುವುದಾಗಿ ಹೇಳಿ ಬ್ಯಾಗ್​ವೊಂದನ್ನು ನೀಡಿದ್ದಾರೆ. ಬ್ಯಾಗ್​ ಪರಿಶೀಲಿಸಿದಾಗ ಹಣದ ಬದಲು ಬಿಳಿ ಹಾಳೆಯ ಕಂತುಗಳು ತುಂಬಿರುವುದನ್ನು ನೋಡಿ ಮೋಸ ಹೋಗಿದ್ದು ಗೊತ್ತಾಗಿದೆ. ಈ ಕುರಿತು ಕೌಲ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details