ಕರ್ನಾಟಕ

karnataka

ETV Bharat / city

ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ಚೌಕಿದಾರನ ಅಗತ್ಯವಿದೆ : ರಾಜಕುಮಾರ ಪಾಟೀಲ - strong India

ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದ್ದು, ಈ ದೇಶವನ್ನ ಲೂಟಿ ಹೊಡೆಯೊ ಕೆಲಸ ಮಾಡಿದ್ದಾರೆ. ಅವರಿಂದ ದೇಶದ ಅಭಿವೃದ್ಧಿ ಮಾಡಲಿಕ್ಕೆ ಆಗಲಿಲ್ಲ. ಹೀಗಾಗಿ, ಈ ದೇಶಕ್ಕೆ ಮತ್ತೊಮ್ಮೆ ಚೌಕಿದಾರನ ಅಗತ್ಯತೆಯಿದೆ ಎಂದ ಸೇಡಂ ಶಾಸಕ ರಾಜಕುಮಾರ ಪಾಟೀಲ್.

ರಾಜಕುಮಾರ ಪಾಟೀಲ

By

Published : Apr 1, 2019, 10:10 AM IST

ಬಳ್ಳಾರಿ: ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತ್ತೊಮ್ಮೆ ಚೌಕಿದಾರ ನರೇಂದ್ರ ಮೋದಿ ಆಡಳಿತ ಅಗತ್ಯವಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್​ ಹೇಳಿದ್ದಾರೆ.

ಬಿಪಿಎಸ್​ಸಿ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಿನ್ನೆ ನಡೆದ ನಾನು ಚೌಕಿದಾರ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿಯವರನ್ನ ಚೋರ್ ಹೈ ಎಂದು ಕಾಂಗ್ರೆಸ್ ಮುಖಂಡರು ಜರಿದಿದ್ದಾರೆ. ಆದರೆ, ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದ್ದು, ಈ ದೇಶವನ್ನ ಲೂಟಿ ಮಾಡಿದೆ. ಅವರಿಂದ ದೇಶದ ಅಭಿವೃದ್ಧಿ ಮಾಡಲಿಕ್ಕೆ ಆಗಲಿಲ್ಲ. ಹೀಗಾಗಿ, ಈ ದೇಶಕ್ಕೆ ಮತ್ತೊಮ್ಮೆ ಚೌಕಿದಾರನ ಅಗತ್ಯತೆಯಿದೆ ಎಂದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿ, ಈ ದೇಶವನ್ನು ಕಳೆದ 5 ವರ್ಷಗಳ ಕಾಲ ಚೌಕಿದಾರನಂತೆ ಕಾದಿದ್ದಾರೆ. ದೇಶದ ರಕ್ಷಣೆ, ರೈತರ ರಕ್ಷಣೆ,ಆರ್ಥಿಕವಲಯ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ, ಆಡಳಿತದಲ್ಲಿ ಪಾರದರ್ಶಕತೆ, ಹಗರಣ ರಹಿತ ಆಡಳಿತ, ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಮಧ್ಯವರ್ತಿಗಳ ಹಾವಳಿ ತಡೆ, ಗಡಿರಕ್ಷಣೆ, ಉಗ್ರರ ಮಟ್ಟಹಾಕಿರುವ ಚೌಕಿದಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸೋಣ ಎಂದರು.

ಅಲ್ಲದೆ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸೋಣವೆಂದು ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ಕರೆ ನೀಡಿದರು.

ABOUT THE AUTHOR

...view details