ಬಳ್ಳಾರಿ: ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನಮ್ಮ ಜೋಡೆತ್ತುಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮೋದಿ-ಯಡಿಯೂರಪ್ಪ ನಮ್ಮ ಜೊಡೆತ್ತುಗಳು: ಡಿಸಿಎಂ ಲಕ್ಷ್ಮಣ ಸವದಿ ಬಣ್ಣನೆ - ಕಲ್ಯಾಣ ಕರ್ನಾಟಕ ಎಂದು ನಾಮಕರಣ
ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಜೋಡೆತ್ತುಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಹೈದರಬಾದ್ -ಕರ್ನಾಟಕ ಹೆಸರು ತೆಗೆದು ಹಾಕಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಿಂದುಳಿದ ಹಣೆಪಟ್ಟಿ ಕಿತ್ತುಹಾಕಲು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು 100 ಕೋಟಿ ರೂ. ಸಿಎಂ ಬಿಡುಗಡೆಗೊಳಿಸಿದ್ದಾರೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಸಮರ್ಥವಾಗಿ ನಿಭಾಹಿಸುತ್ತಿರುವ ಸಚಿವ ಸಿ.ಟಿ.ರವಿ ಅವರ ಖಾತೆಗಳನ್ನು ಬದಲಾವಣೆ ಮಾಡಬಾರದು ಎಂದು ಸಿಎಂಗೆ ಮನವಿ ಮಾಡಿದರು. ಈ ವೇಳೆ, ಸಚಿವ ಸಿ.ಟಿ.ರವಿ ಅವರ ಕಡೆ ನೋಡಿ ಯಾಕೆ ಹಾಗೇ ನೋಡುತ್ತೀಯಾ ಕೆಂಗಣ್ಣಿನಿಂದ ನಿಮಗೆ ಇಷ್ಟವಿಲ್ವ ಎಂದು ಕೇಳುತ್ತಿದ್ದಂತೆ ಸಚಿವ ರವಿ ಅವರು ಪ್ರತಿಕ್ರಿಯಿಸಿ ಖಾತೆ ನಿಭಾಯಿಸಲು ಬದ್ಧ ಎಂದರು.
ಸಚಿವ ಸಿ.ಟಿ.ರವಿ ಮಾತನಾಡಿ, ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ನಿಶ್ಚಿತ ದಿನಾಂಕದಲ್ಲಿ ನಡೆಸಲಾಗುವುದು. ಇಲಾಖೆ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಉತ್ಸವ ದಿನಾಂಕ ದಾಖಲಿಸಲಾಗುವುದು. ಹಂಪಿ ಉತ್ಸವ ಕೇವಲ ಮನರಂಜನೆ ಕಾರ್ಯಕ್ರಮವಲ್ಲ, ಬದಲಿಗೆ ಭೂತವನ್ನ ವರ್ತಮಾನದ ಜತೆ ಬೆಸೆಯುವ ಕೊಂಡಿ ಎಂದರು. ಈ ಹಿಂದೆ ವಿಜಯನಗರ ಸಾಮ್ರಾಜ್ಯವನ್ನು ಹಾಳು ಮಾಡಿದ ಜನರು, ಇಂದು ಭಾರತಕ್ಕೂ ಆತಂಕ ತಂದೊಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 29 ವರ್ಷದ ಹಿಂದೆ ಕಾಲೇಜು ಮುಗಿಸಿದ ನನ್ನನ್ನು ಹಂಪಿಗೆ ಕರೆತಂದಿರುವ ದಿನಗಳು ನೆನಪಾಗುತ್ತಿವೆ. ಇಂದು ಸಚಿವರಾಗಿ ಹಂಪಿಯಲ್ಲಿ ಬಂದು ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಎಂದು ಬಾಲ್ಯದ ನೆನಪು ಮಾಡಿಕೊಂಡರು.
ಅಲ್ಲದೇ ವೇದಿಕೆಗೆ ಗಣ್ಯರನ್ನು ಆಹ್ವಾನಿಸುವ ವೇಳೆ ಹೂ ಗುಚ್ಛ ನೀಡುವುದನ್ನು ಈ ಬಾರಿ ಕೈ ಬಿಟ್ಟು ಅದಕ್ಕಾಗಿ ವ್ಯಯಿಸುವ 20 ಸಾವಿರ ರೂ. ಹಣವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು.