ಬಳ್ಳಾರಿ:ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮದಿನಾಚರಣೆ ನಿಮಿತ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋ ಕುರಿತು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಟಿವಿ ಭಾರತ ಪ್ರಸ್ತುತಪಡಿಸಿದ 'ವೈಷ್ಣವ ಜನತೋ' ಗಾಯನಕ್ಕೆ ಎಂಎಲ್ಸಿ ಕೊಂಡಯ್ಯ ಮೆಚ್ಚುಗೆ - ಎಂಎಲ್ಸಿ ಕೊಂಡಯ್ಯ
ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ಈ ಟಿವಿ ಭಾರತ ವಿಶೇಷತೆಗೆ ಎಂಎಲ್ಸಿ ಕೊಂಡಯ್ಯ ಹಾಗೂ ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![ಈ ಟಿವಿ ಭಾರತ ಪ್ರಸ್ತುತಪಡಿಸಿದ 'ವೈಷ್ಣವ ಜನತೋ' ಗಾಯನಕ್ಕೆ ಎಂಎಲ್ಸಿ ಕೊಂಡಯ್ಯ ಮೆಚ್ಚುಗೆ](https://etvbharatimages.akamaized.net/etvbharat/prod-images/768-512-4622421-thumbnail-3x2-chai.jpg)
ಎಂಎಲ್ಸಿ ಕೊಂಡಯ್ಯ
ಗಾಂಧೀಜಿಯವರ ವಿಚಾರ-ಧಾರೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಈ ದೇಶ ಕಂಡ ಅಪರೂಪದ ಮಹಾನ್ ನಾಯಕ ಗಾಂಧೀಜಿ. ಪ್ರಖ್ಯಾತ ಗಾಯಕರು ಹಾಡಿರುವ ವೈಷ್ಣವ ಜನತೋ ಹಾಡಿಗೆ ಎಲ್ಲೆಡೆ ಜನಮೆಚ್ಚುಗೆ ಪಡೆದುಕೊಂಡಿದೆ. ಇಂತಹ ಉತ್ತಮ ಕಾರ್ಯಕ್ರಮವನ್ನು ಈಟಿವಿ ಭಾರತ ಪ್ರಸಾರ ಮಾಡುತ್ತಿರೋದು ಶ್ಲಾಘನಾರ್ಹ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಳ್ಳಾರಿ ನಗರದ ವೈದ್ಯ ಡಾ.ಬಿ.ಕೆ ಸುಂದರ ಅವರೂ ಕೂಡ ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಟಿವಿ ಭಾರತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.