ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದ ಅಗ್ನಿಶಾಮಕ ದಳದ ಕಚೇರಿಯ ಬಳಿ ಆಯತಪ್ಪಿ ಬಿದ್ದ ವ್ಯಕ್ತಿಯೊರ್ವನನ್ನು ಆಸ್ಪತ್ರೆ ಸೇರಿಸುವ ಮೂಲಕ ಕಂಪ್ಲಿ ಶಾಸಕ್ ಜೆ. ಎನ್. ಗಣೇಶ ಮಾನವೀಯತೆ ಮೆರೆದಿದ್ದಾರೆ.
ರಸ್ತೆ ಮೇಲೆ ಬಿದ್ದ ವ್ಯಕ್ತಿಯನ್ನ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದ ಕಂಪ್ಲಿ ಶಾಸಕ ಗಣೇಶ್…! - ಕಂಪ್ಲಿ ಶಾಸಕ ಗಣೇಶ ಸಮಾಜ ಸೇವೆ
ರಸ್ತೆ ಪಕ್ಕದಲ್ಲಿ ಆಯ ತಪ್ಪಿ ಬಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಕಂಪ್ಲಿ ಶಾಸಕ ಜೆ. ಎನ್. ಗಣೇಶ್ ಮಾನವೀಯತೆ ಮೆರೆದಿದ್ದಾರೆ.

ಕಂಪ್ಲಿ ಶಾಸಕ ಗಣೇಶ್
ರಸ್ತೆ ಮೇಲೆ ಬಿದ್ದ ವ್ಯಕ್ತಿಯನ್ನ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದ ಕಂಪ್ಲಿ ಶಾಸಕ ಗಣೇಶ
ಕುರುಗೋಡಿನಿಂದ ಕಂಪ್ಲಿಯ ವಿಧಾನಸಭಾ ಕ್ಷೇತ್ರದತ್ತ ತೆರಳುವಾಗ ಅಗ್ನಿಶಾಮಕ ದಳದ ಕಚೇರಿಯ ಎದುರಿನ ರಸ್ತೆಯ ಮೇಲೆ ಬಿದ್ದ ವ್ಯಕ್ತಿಯೋರ್ವನನ್ನ ಕಂಡ ಶಾಸಕ ಗಣೇಶ್ ಕೂಡಲೇ ಕಾರಿನಿಂದ ಇಳಿದು ಬಂದು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಸ್ಟ್ರಚರ್ನಲ್ಲಿ ರೋಗಿಯನ್ನು ಮಲಗಿಸಿ ಸ್ಥಳೀಯರ ಸಹಾಯದಿಂದ ಆ್ಯಂಬುಲೆನ್ಸ್ ಒಳಗೆ ಸಾಗಿಸಿದ್ದಾರೆ.
ರೋಗಿಯನ್ನು ಕುರುಗೋಡಿನ 23ನೇಯ ವಾರ್ಡಿನ ಪಕೀರಪ್ಪ ಎಂದೇ ಗುರುತಿಸಲಾಗಿದ್ದು, ಉಜ್ಜನಿ ಸ್ವಾಮಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.