ಕರ್ನಾಟಕ

karnataka

ಜಮೀನಿನಲ್ಲಿದ್ದ ಸರ್ಕಾರಿ ಕಾಲುವೆಗಳನ್ನು ಮುಚ್ಚಿದ ವ್ಯಕ್ತಿ: ರೈತರಿಗೆ ತೊಂದರೆ ಆರೋಪ

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ವ್ಯಕ್ತಿಯೊಬ್ಬರು ಜಮೀನು ಖರೀದಿ ಮಾಡಿದ್ದು, ಈ ಜಮೀನನಲ್ಲಿದ್ದ ಸರ್ಕಾರಿ ಕಾಲುವೆಗಳನ್ನು ಮುಚ್ಚಿ ರೈತರಿಗೆ ತೊಂದರೆ ನೀಡಿದ್ದಾರೆ ಎಂದು ಶಾಸಕ ಗಣೇಶ್ ದೂರಿದರು.

By

Published : Oct 7, 2020, 5:11 PM IST

Published : Oct 7, 2020, 5:11 PM IST

MLA Ganesh accused of shutting down the canal
ತನ್ನ ಜಮೀನಿನಲ್ಲಿದ್ದ ಕಾಲುವೆಗಳನ್ನು ಮುಚ್ಚಿದ ವ್ಯಕ್ತಿ : ರೈತರಿಗೆ ಭಾರೀ ಹೊಡೆತ

ಬಳ್ಳಾರಿ : ಜಿಲ್ಲೆಯ ಕಂಪ್ಲಿ ತಾಲೂಕಿನ ವ್ಯಕ್ತಿಯೊಬ್ಬರು 185 ಎಕರೆ ಜಮೀನು ಖರೀದಿ ಮಾಡಿ, ಈ ಜಮೀನನಲ್ಲಿದ್ದ ಸರ್ಕಾರಿ ಕಾಲುವೆಗಳನ್ನು ಮುಚ್ಚಿ ರೈತರಿಗೆ ತೊಂದರೆ ನೀಡಿದ್ದಾರೆ ಎಂದು ಶಾಸಕ ಜಿ.ಗಣೇಶ್ ದೂರಿದರು.

ತನ್ನ ಜಮೀನಿನಲ್ಲಿದ್ದ ಕಾಲುವೆಗಳನ್ನು ಮುಚ್ಚಿದ ವ್ಯಕ್ತಿ: ರೈತರಿಗೆ ತೊಂದರೆ

ಈ ಭಾಗದಲ್ಲಿದ್ದ ಸುಮಾರು 400 ಎಕರೆ ಜಮೀನಿಗೆ ಕಾಲುವೆಗಳಿಂದ ನೀರು ಬಿಡಲಾಗುತ್ತಿತ್ತು. ಇದೀಗ ಆ ವ್ಯಕ್ತಿಯು ತನ್ನ ಜಮೀನಿನಲ್ಲಿದ್ದ ಕಾಲುವೆಗಳನ್ನು ಮುಚ್ಚಿದ್ದರಿಂದ ಇಲ್ಲಿನ ರೈತರ ಜಮೀನಿಗೆ ನೀರು ಬಿಡಲು ಕಷ್ಟವಾಗುತ್ತಿದೆ ಎಂದರು.

ಸದ್ಯ ಬೆಳೆ ಕಟಾವಿಗೆ ಬರುವ ಸ್ಥಿತಿಯಲ್ಲಿದೆ. ಈ ವೇಳೆ ಕಾಲುವೆಗಳನ್ನು ಮುಚ್ಚಿದ್ದರಿಂದಾಗಿ ಈ ಭಾಗದ ರೈತರಿಗೆ ಭಾರೀ ಹೊಡೆತ ಬಿದ್ದಿದೆ ಎಂದು ಜಿ.ಗಣೇಶ್ ಹೇಳಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ಕಾಲುವೆಯ ನೀರನ್ನು ಕೆಳಗಿನ ಜಮೀನುಗಳಿಗೆ ಬಿಡಬೇಕು. ಆದ್ರೆ ಈಗ ತಕರಾರು ಮಾಡುತ್ತಿರೋ ವ್ಯಕ್ತಿ, ಕಾಲುವೆಗಳನ್ನು ಮುಚ್ಚಿದ್ದ ರಿಂದಾಗಿ ರೈತರಿಗೆ ಸಮಸ್ಯೆಯಾಗಿದೆ.

ಬಳ್ಳಾರಿಯ ಪಕ್ಕದಲ್ಲೇ ಇರುವ ಕೊಳೋರು, ಸೋಮಸಮುದ್ರ, ಭಾಗ್ಯ ನಗರ ಕ್ಯಾಂಪ್ ಬಳಿ ಇರೋ ಜಮೀನುಗಳಿಗೆ ಈ‌ ಸಮಸ್ಯೆ ಉಂಟಾಗಿದೆ. ಈ ಘಟನೆಯ ಹಿಂದೆ ಮಾಜಿ ಶಾಸಕರೊಬ್ಬರ ಕೈವಾಡವಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಗಣೇಶ್​​ ಹೇಳಿದರು.

ABOUT THE AUTHOR

...view details