ವಿಜಯನಗರ:ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರಿಗೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಎಸ್ ಭೀಮನಾಯ್ಕ ನೆರವು ನೀಡಿದರು. ಶಕೀನಾಬಿ ಹಾಗು ಅವರ ಮಗ ರಫೀಕ್ ಗಾಯಗೊಂಡು ಪ್ರಜ್ಞಾಹೀನರಾಗಿ ರಸ್ತೆಯಲ್ಲಿ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿಯಿಂದ ಹೋಗುತ್ತಿದ್ದ ಶಾಸಕರು ಘಟನೆಯನ್ನು ಗಮನಿಸಿ ಗಾಯಾಳುಗಳನ್ನು ತಮ್ಮದೇ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಅಪಘಾತದಲ್ಲಿ ತಾಯಿ, ಮಗನಿಗೆ ಗಾಯ: ತಮ್ಮದೇ ವಾಹನದಲ್ಲಿ ಆಸ್ಪತ್ರೆ ಸೇರಿಸಿದ ಶಾಸಕ - ಈಟಿವಿ ಭಾರತ್ ಕರ್ನಾಟಕ
ಶಾಸಕ ಎಸ್ ಭೀಮನಾಯ್ಕ ಅವರು ಹಗರಿಬೊಮ್ಮನಹಳ್ಳಿಯಲ್ಲಿ ಸಂಚರಿಸುತ್ತಿದ್ದಾಗ ದಾರಿ ಮಧ್ಯೆ ಬೈಕ್ ಅಪಘಾತವಾಗಿರುವುದನ್ನು ಕಂಡು ಸಹಾಯಹಸ್ತ ಚಾಚಿದ್ದಾರೆ.

ಬೈಕ್ ಅಪಘಾತವಾದವರಿಗೆ ಸಹಕಾರ ನೀಡಿ ಮಾನವೀಯತೆ ಮೆರೆದ ಶಾಸಕ
ಅಪಘಾತದಲ್ಲಿ ತಾಯಿ, ಮಗನಿಗೆ ಗಾಯ