ಬಳ್ಳಾರಿ :ಲಾಕ್ಡೌನ್ ಹಿನ್ನೆಲೆ ದೇಶದ ಎಲ್ಲ ದೇಗುಲಗಳು ಬಂದ್ ಆಗಿವೆ. ಹೀಗಾಗಿ, ನೀವ್ಯಾರು ನನ್ನ ಬಳಿ ಬರಬೇಡಿ. ನಾನೇ ನಿಮ್ಮ ಬಳಿ ಬರುವೆನೆಂದು ವೈದ್ಯರ ರೂಪದಲ್ಲಿ ಭಗವಂತ ಬಂದಿದ್ದಾನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.
ಆ ಭಗವಂತನೇ ವೈದ್ಯರ ರೂಪದಲ್ಲಿ ಬಂದಿದ್ದಾನೆ.. ಸಚಿವ ಶ್ರೀರಾಮುಲು ಸಮರ್ಥನೆ - Ballary district news
ವೈದ್ಯರು ಕೋವಿಡ್-19 ನಿಯಂತ್ರಣದಲ್ಲಿ ಫ್ರೆಂಟ್‌ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾವೆಲ್ಲರೂ ಗೌರವಿಸಬೇಕು..
ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಸಚಿವ ಬಿ.ಶ್ರೀರಾಮುಲು
ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕಿಯರಿಗೆ, ಪೊಲೀಸರಿಗೆ ಹಾಗೂ ಪೌರ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.
ವೈದ್ಯರು ಕೋವಿಡ್-19 ನಿಯಂತ್ರಣದಲ್ಲಿ ಫ್ರೆಂಟ್‌ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾವೆಲ್ಲರೂ ಗೌರವಿಸಬೇಕು ಎಂದು ಸಚಿವರು ಹೇಳಿದರು. ಮಾಸ್ಕ್, ಸ್ಯಾನಿಟೈಸರ್ ವಿತರಣೆಯಲ್ಲಿ ತೊಡಗಿದ ಸಮರ್ಥನಂ ಅಂಗವಿಕಲ ಸಂಸ್ಥೆಯ ಕಾರ್ಯಕ್ಕೆ ಶ್ಲಾಘಿಸಿದರು.