ಕರ್ನಾಟಕ

karnataka

ETV Bharat / city

ಮೂರನೇ ಅಲೆ ಎದುರಿಸಲು ಬಳ್ಳಾರಿಯಲ್ಲಿ ಮಕ್ಕಳಿಗಾಗಿ 300 ಬೆಡ್ ಮೀಸಲಿಡಲಾಗುವುದು: ಸಚಿವ ಆನಂದ್​ ಸಿಂಗ್ - ಬಳ್ಳಾರಿ ಕೊರೊನಾ ಮುಂಜಾಗೃತಾ ಕ್ರಮ

ಮೂರನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿಯಲ್ಲಿ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಬೆಡ್​ಗಳನ್ನು ಮೀಸಲು ಇಟ್ಟಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹೇಳಿದರು.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್

By

Published : Jun 3, 2021, 10:14 AM IST

Updated : Jun 3, 2021, 1:23 PM IST

ಹೊಸಪೇಟೆ: ನಗರದ ಎಂಸಿಹೆಚ್ ಕೊವೀಡ್ ಆಸ್ಪತ್ರೆ ಹಾಗೂ ಜಂಬುನಾಥಹಳ್ಳಿಯ ಕೋವಿಡ್ ಕೇರ್ ಸೆಂಟರ್​ಗೆ ಹಜ್ ಮತ್ತು ವಕ್ಫ್​ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.

ಎಂಸಿಹೆಚ್ ಆಸ್ಪತ್ರೆಯ ಆಕ್ಸಿಜನ್ ಪೂರೈಕೆ ಸ್ಥಳಕ್ಕೂ ಭೇಟಿ ನೀಡಿ, ವೈದ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿ, ಎರಡನೇಯ ಅಲೆ ಮುಗಿಯಿತು. ಇನ್ನು ಮೂರನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಬಳ್ಳಾರಿಯಲ್ಲಿ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಬೆಡ್​ಗಳನ್ನು ಮೀಸಲು ಇಟ್ಟಿದ್ದೇವೆ ಎಂದು ಹೇಳಿದರು.

ಮೂರನೇ ಅಲೆ ಎದುರಿಸಲು ಬಳ್ಳಾರಿಯಲ್ಲಿ ಮಕ್ಕಳಿಗಾಗಿ 300 ಬೆಡ್ ಮೀಸಲಿಡಲಾಗುವುದು: ಸಚಿವ ಆನಂದ್​ ಸಿಂಗ್

ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಸುಮಾರು 300 ಬೆಡ್​ಗಳನ್ನು ಮೀಸಲೀಡಲು ನಾನು ಸಲಹೆ ಕೊಟ್ಟಿದ್ದೇನೆ. 50-60 ಬೆಡ್​ಗಳು ಆಗುವುದಿಲ್ಲ. ಜಿಲ್ಲೆಯಲ್ಲಿ ನಮಗೆ ಬೇಕಾಗುವಷ್ಟು ಬೆಡ್​​ಗಳು ಇವೆ. ಹೊಸಪೇಟೆ, ಬಳ್ಳಾರಿ, ಜಿಂದಾಲ್ ಸೇರಿ 200 ಬೆಡ್​ಗಳು ಮತ್ತು ಹರಪನಹಳ್ಳಿಯಲ್ಲಿ 50 ಬೆಡ್​​ಗಳನ್ನು ಮಕ್ಕಳಿಗಾಗಿ ಮೀಸಲಿಡಲು ಚಿಂತನೆ ನಡೆದಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುತ್ತೇವೆ ಎಂದು ಹೇಳಿದರು.

Last Updated : Jun 3, 2021, 1:23 PM IST

ABOUT THE AUTHOR

...view details