ಹೊಸಪೇಟೆ (ವಿಜಯನಗರ):ನಗರದ ವೇಣುಗೋಪಾಲ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಸಚಿವ ಆನಂದ ಸಿಂಗ್ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದರು. ಕುಟುಂಬ ಸಮೇತರಾಗಿ ಹೋಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಮಕ್ಕಳು ಆನಂದ ಸಿಂಗ್ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡರು.
ಸಚಿವ ಆನಂದ ಸಿಂಗ್ ರಾಜೀನಾಮೆ ನೀಡ್ತಾರೆಂಬ ವಿಚಾರ; ನೋ ಕಾಮೆಂಟ್ಸ್ ಎಂದ ಮಿನಿಸ್ಟರ್ - ವಿಜಯನಗರ
ಸಚಿವ ಸ್ಥಾನದ ಬಗ್ಗೆ ಅಸಮಾಧಾನಗೊಂಡಿರುವ ಆನಂದ ಸಿಂಗ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದು, ನೋ ಕಾಮೆಂಟ್ಸ್ ಪ್ಲೀಸ್ ಎಂದಿದ್ದಾರೆ.
ಸಚಿವ ಆನಂದ ಸಿಂಗ್ ರಾಜೀನಾಮೆ ನೀಡ್ತಾರೆಂಬ ವಿಚಾರ; ನೋ ಕಾಮೆಂಟ್ಸ್ ಎಂದ ಮಿನಿಸ್ಟರ್
ಇದೇ ವೇಳೆ ತಮಗೆ ನೀಡಿರುವ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆಗೆ ಅವರು ನಿರಾಕರಿಸಿದ್ದು, ನೋ ಕಾಮೆಂಟ್ಸ್ ಪ್ಲೀಸ್ ಎಂದಿದ್ದಾರೆ.