ಕರ್ನಾಟಕ

karnataka

ETV Bharat / city

ಕೊರೊನಾ ಸೋಂಕಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪುರುಷರೇ ಹೆಚ್ಚು ಬಲಿ! - ಬಳ್ಳಾರಿ ಕೊರೊನಾ ಅಪ್​ಡೇಟ್​

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ 698 ಪುರುಷರು ಮತ್ತು 392 ಮಹಿಳೆಯರು ಬಲಿಯಾಗಿದ್ದಾರೆ. ಈ ಪೈಕಿ ಮೊದಲನೇ ಅಲೆಯಲ್ಲಿ 391, ಎರಡನೇ ಅಲೆಯಲ್ಲಿ 307 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ.

Bellary
ಕೊರೊನಾ ಸೋಂಕಿಗೆ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪುರುಷರೇ ಹೆಚ್ಚು ಬಲಿ

By

Published : May 20, 2021, 2:03 PM IST

ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿಗೆ ಗಣಿನಾಡು ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪುರುಷರೇ ಹೆಚ್ಚಾಗಿ ಬಲಿಯಾಗಿರುವುದಾಗಿ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ.

ಉಭಯ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿಗೆ ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚಾಗಿ‌ ತುತ್ತಾಗಿದ್ದಾರೆ. ಜಿಲ್ಲಾಡಳಿತ ಮೊದಲ ಮತ್ತು ಎರಡನೇ ಅಲೆಗಳನ್ನು ಅವಲೋಕಿಸಿ, ಲಿಂಗಾನುಪಾತದಲ್ಲಿ ಯಾರು ಹೆಚ್ಚಾಗಿ ಮೃತಪಟ್ಟಿದ್ದಾರೆ ಎಂಬ ವರದಿಯನ್ನ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಪುರುಷರೇ ಹೆಚ್ಚಾಗಿ ಬಲಿಯಾಗಿರುವ ಮಾಹಿತಿ ಲಭ್ಯವಾಗಿದೆ.

ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ 698 ಪುರುಷರು ಮತ್ತು 392 ಮಹಿಳೆಯರು ಬಲಿಯಾಗಿದ್ದಾರೆ. ಈ ಪೈಕಿ ಮೊದಲನೇ ಅಲೆಯಲ್ಲಿ 391, ಎರಡನೇ ಅಲೆಯಲ್ಲಿ 307 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ. ಮಹಿಳೆಯರು ಕ್ರಮವಾಗಿ 206 ಮತ್ತು 186 ಮೃತಪಟ್ಟಿದ್ದಾರೆ. ಒಟ್ಟಾರೆ, ಈವರೆಗೆ 1,090 ಮಂದಿ ಕೋವಿಡ್​ಗೆ ಬಲಿಯಾಗಿದ್ದು, ಇದರಲ್ಲಿ 392 ಮಹಿಳೆಯರಿದ್ದಾರೆ.

ಮೊದಲ ಅಲೆಯಲ್ಲಿ ಪುರುಷರ ಸಾವಿನ ಪ್ರಮಾಣ ಶೇ. 65ರಷ್ಟಿದ್ದರೆ, ಎರಡನೇ ಅಲೆಯಲ್ಲಿ ಶೇ. 62ರಷ್ಟಿದೆ. ಮೊದಲ ಅಲೆಯಲ್ಲಿ ವೃದ್ಧರು, ವಯಸ್ಕರೇ ಹೆಚ್ಚಾಗಿ ಸೋಂಕಿಗೆ ಬಲಿಯಾಗಿದ್ದರೆ, ಎರಡನೇ ಅಲೆಯಲ್ಲಿ ಹೆಚ್ಚಾಗಿ ವಯಸ್ಕರೇ ಸೋಂಕಿಗೆ ಬಲಿಯಾಗಿದ್ದಾರೆ.

20ರಿಂದ 40 ವರ್ಷದೊಳಗಿನ ಒಟ್ಟು 120 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಇದರಲ್ಲಿ 81 ಮಂದಿ ಎರಡನೇ ಅಲೆಯಲ್ಲಿ ಮೃತಪಟ್ಟವರಾಗಿದ್ದಾರೆ. ಉಳಿದಂತೆ 40-60 ವಯಸ್ಸಿನೊಳಗಿವರು ಈವರೆಗೆ 461, 61-80 ವಯಸ್ಸಿನವರು 437, 80 ವರ್ಷ ಮೇಲ್ಪಟ್ಟವರು 75 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬಳ್ಳಾರಿ, ಹೊಸಪೇಟೆ ತಾಲೂಕಿನಲ್ಲೇ ಹೆಚ್ಚು ಸಾವು:

ಬಳ್ಳಾರಿ, ಹೊಸಪೇಟೆ ತಾಲೂಕಿನಲ್ಲೇ ಮಹಾಮಾರಿ ಕೊರೊನಾ ಸೋಂಕಿಗೆ ಹೆಚ್ಚಿನ ಸಾವಾಗಿವೆ. ಬಳ್ಳಾರಿಯಲ್ಲಿ ಮೊದಲ ಅಲೆಗೆ 280 ಹಾಗೂ ಎರಡನೇ ಅಲೆಯಲ್ಲಿ 275 ಮಂದಿ ಕೊನೆಯುಸಿರೆಳೆದಿದ್ದಾರೆ. ಹೊಸಪೇಟೆಯಲ್ಲಿ ಮೊದಲ ಅಲೆಯಲ್ಲಿ 97 ಮತ್ತು ಎರಡನೇ ಅಲೆಯಲ್ಲಿ 76 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಲಾಕ್‌ಡೌನ್ ಯಶಸ್ವಿಗಾಗಿ ಇನ್ನಷ್ಟು ಬಿಗಿ ಕ್ರಮ: ಬಸವರಾಜ ಬೊಮ್ಮಾಯಿ

ABOUT THE AUTHOR

...view details