ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಫೆಬ್ರವರಿ 10 ರಂದು ನಡೆದ ಐಷಾರಾಮಿ ಕಾರು ಅಪಘಾತದ ಬಗ್ಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ಮರಿಯಮ್ಮನಹಳ್ಳಿ ಅಪಘಾತ: ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಟೊದಲ್ಲಿ ತೆರಳಿದ್ರಾ ಸಚಿವರ ಕಡೆಯವರು? - ಬಳ್ಳಾರಿ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಕಾರು ಅಪಘಾತ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಫೆಬ್ರವರಿ 10 ರಂದು ನಡೆದ ಐಷಾರಾಮಿ ಕಾರು ಅಪಘಾತದ ಬಗ್ಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು
ಕೆಂಪು ಬೆಂಜ್ ಕಾರೊಂದು ರಸ್ತೆ ಅಪಘಾತಕ್ಕೂ ಮುನ್ನ ಅತಿ ವೇಗವಾಗಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತವಾದ ತಕ್ಷಣ ಸಚಿವರ ಕಡೆಯವರು ಗಾಯಾಳುಗಳನ್ನು ಬೇರೆ ಕಾರಿನಲ್ಲಿ ಹೊಸಪೇಟೆ ನಗರದ ಮೈತ್ರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಬದಲಾದ ಕಾರಿನೊಳಗೆ ಇದ್ದವರು ಕೂಡ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ನಂತರ ಇವರು ಆಟೋದಲ್ಲಿ ಬೆಂಗಳೂರು ಮಾರ್ಗವಾಗಿ ತೆರಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಕುರಿತು ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.