ಕರ್ನಾಟಕ

karnataka

ETV Bharat / city

ಬಳ್ಳಾರಿ: ಪತ್ನಿ ಶೀಲ ಶಂಕಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ - ಈಟಿವಿ ಭಾರತ ಕನ್ನಡ

ಪತ್ನಿಯ ಶೀಲ ಶಂಕಿಸಿ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹೊಸ‌ ಚಪ್ಪರದ ಹಳ್ಳಿಯಲ್ಲಿ ನಡೆದಿದೆ.

Bellary
ಬಳ್ಳಾರಿ

By

Published : Aug 2, 2022, 8:47 AM IST

ಬಳ್ಳಾರಿ:ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿ ಗ್ರಾಮದ ಮಾರುತಿ ಎಂಬಾತ ತನ್ನ ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಸಂಡೂರು ತಾಲೂಕಿನ ಹೊಸ‌ ಚಪ್ಪರದ ಹಳ್ಳಿಯಲ್ಲಿ ನಡೆದಿದೆ. ಅಲ್ಲದೇ ಆರೋಪಿ ಮಾವನಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗ್ತಿದೆ.

ಶ್ವೇತಾ ಅಲಿಯಾಸ್ ರಾಜೇಶ್ವರಿ (32) ಕೊಲೆಯಾದ ಮಹಿಳೆ. ಮೃತಳ ತಂದೆ ಪಾಂಡುರಂಗ ಘಟನೆಯಲ್ಲಿ ಗಾಯಗೊಂಡು ಬಳ್ಳಾರಿಯ ವಿಮ್ಸ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಶ್ವೇತಾ ಹೆಚ್ಚಿನ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ:ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿ ಗ್ರಾಮದವನಾದ ಈತನಿಗೆ ಕಳೆದ 11 ವರ್ಷದ ಹಿಂದೆ ಶ್ವೇತಾಳನ್ನು ಕೊಟ್ಟು ವಿವಾಹ ಮಾಡಲಾಗಿತ್ತು. ದಂಪತಿಗೆ 10 ವರ್ಷದ ಶ್ರೇಹಾನ್ ಎಂಬ ಮಗ ಹಾಗೂ 8 ವರ್ಷದ ಶ್ರೇಯಾ ಎನ್ನುವ ಮಗಳಿದ್ದಾಳೆ.

ಕಳೆದ ಕೆಲ ವರ್ಷಗಳಿಂದ ಶ್ವೇತಾ ಮೇಲೆ ವಿನಾಕಾರಣ ಅನುಮಾನಿಸುತ್ತಿದ್ದನಂತೆ. ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದಾಗಿ ಬೇೆಸತ್ತ ಶ್ವೇತಾ ತನ್ನ ಇಬ್ಬರು ಮಕ್ಕಳೊಂದಿಗೆ ತಂದೆಯ ಮನೆ ಹೊಸ ಚಪ್ಪರದಹಳ್ಳಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ಆಗಮಿಸಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಸೋಮವಾರ ಮಧ್ಯಾಹ್ನ ಮಾರುತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೆಂಡತಿ ಊರಿಗೆ ಬಂದಿದ್ದನಂತೆ. ಹೆಂಡತಿ ಮನೆ ಹೊರಗಡೆ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಈತ ಅತ್ತೆ ಮಾವ ಅಂಗಡಿಗೆ ಸಾಮಗ್ರಿ ತರುವುದಕ್ಕೆ ಹೋಗಿರುವ ಸಮಯ ನೋಡಿಕೊಂಡು ತನ್ನ ಮಕ್ಕಳ ಎದುರೆ ಹೆಂಡತಿಯ ಬೆನ್ನು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.

ಮನೆಗೆ ಬಂದ ತಂದೆ ಪಾಂಡುರಂಗ ಮಗಳು ಬಿದ್ದಿರುವುದನ್ನು ನೋಡಿ ಅಲ್ಲಿಯೇ ಇದ್ದ ಅಳಿಯನನ್ನು ಹಿಡಿಯಲು ಮುಂದಾಗಿದ್ದಾರೆ. ಆರೋಪಿ ಅವರ ತಲೆಗೆ ಹೊಡೆದು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗ್ತಿದೆ. ಸಂಡೂರು ಪೊಲೀಸರು ಸ್ಥಳಕ್ಕೆ ಭೇಟಿ ಆರೋಪಿಯನ್ನು ವಶಕ್ಕೆ ಪಡೆದ್ದಾರೆ. ಈ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಯುವತಿಯೊಂದಿಗೆ ನಗ್ನ ವಿಡಿಯೋ ಚೆಲ್ಲಾಟ.. ಇಂಜಿನಿಯರ್​ನಿಂದ 25 ಲಕ್ಷ ದೋಚಿದ ಸೈಬರ್​ ಖದೀಮರು!

ABOUT THE AUTHOR

...view details