ಕರ್ನಾಟಕ

karnataka

ETV Bharat / city

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ.. - ಮೈಲಾರ ಕಾರ್ಣಿಕ,

31 ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇಹಲೋಕ ತ್ಯಜಿಸಿದ್ದಾರೆ.

Vijayanagar
ಗೊರವಯ್ಯ ಮಾಲತೇಶಪ್ಪ

By

Published : Jun 22, 2021, 11:41 AM IST

Updated : Jun 22, 2021, 12:11 PM IST

ಹೊಸಪೇಟೆ (ವಿಜಯನಗರ):ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗ್ಗೆ (60) ಕೊನೆಯುಸಿರೆಳೆದಿದ್ದಾರೆ.

ಕಳೆದ 31 ವರ್ಷಗಳಿಂದ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಹಲವು ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಮಾಲತೇಶಪ್ಪ ಅವರಿಗೆ ಸ್ವಂತ ಸೂರು ಇರಲಿಲ್ಲ. ಸಂಕಷ್ಟದಲ್ಲಿದ್ದ ಅವರಿಗೆ ಮನೆ ನಿರ್ಮಿಸಿ ಕೊಡಲು ನಾಡಿನ ಜನತೆ ಸಹಾಯಹಸ್ತ ಚಾಚಿದ್ದರು. ಆದರೆ, ಮನೆ ನಿರ್ಮಾಣ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

ಗೊರವಯ್ಯ ಮಾಲತೇಶಪ್ಪ ಅವರ ಅಂತ್ಯಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮುಂಗಾರು ಶುರುವಾದ್ರೂ ಮುಗಿಯದ ಉಪ ಕಾಲುವೆಗಳ ಜೀರ್ಣೋದ್ಧಾರ ಕಾರ್ಯ

Last Updated : Jun 22, 2021, 12:11 PM IST

ABOUT THE AUTHOR

...view details