ಬಳ್ಳಾರಿ: ನಗರದ ಹೊರವಲಯದಲ್ಲಿರುವ ಹರಗಿನಡೋಣಿ ರಸ್ತೆ ಬಳಿ ಅಂದಾಜು 84 ಎಕರೆಯ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯಕ್ಕೆ ಶಾಸಕ ಗಾಲಿ ಸೋಮಶೇಖರರೆಡ್ಡಿ ಭೂಮಿಪೂಜೆ ನೆರವೇರಿಸಿದರು.
ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ - ಬಳ್ಳಾರಿ ಲೇಟೆಸ್ಟ್ ನ್ಯೂಸ್
ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಬಳ್ಳಾರಿಯ ಹರಗಿನಡೋಣಿ ರಸ್ತೆ ಬಳಿ ಅಂದಾಜು 84 ಎಕರೆಯ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯಕ್ಕೆ 12.96 ಕೋಟಿ ರೂ. ಅನುದಾನ ಕೂಡ ಬಿಡುಗಡೆಯಾಗಿದೆ ಎಂದು ಶಾಸಕ ಗಾಲಿ ಸೋಮಶೇಖರರೆಡ್ಡಿ ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವರಾಗಿದ್ದ ಗಾಲಿ ಕರುಣಾಕರರೆಡ್ಡಿ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ವೇಳೆ ನಾನು ಈ ಜಾಗ ಖರೀದಿಸಿದ್ದೆ. ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೋಸ್ಕರನೇ ಈ ಜಾಗವನ್ನ ಖರೀದಿಸಲಾಗಿತ್ತು. ಇದೀಗ ಅದು ಈಡೇರಿಕೆಯಾಗುವ ಕಾಲ ಸನ್ನಿಹಿತವಾಗಿದೆ.
ಸದ್ಯ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯಕ್ಕೆ 12.96 ಕೋಟಿ ರೂ. ಅನುದಾನ ಕೂಡ ಬಿಡುಗಡೆಯಾಗಿದೆ. ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ವೈಜ್ಞಾನಿಕ ವಿಲೇವಾರಿ ಘಟಕ ನಿರ್ಮಾಣ ಆಗಲಿದೆ ಎಂದರು.
ಬಳಿಕ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಅಂದಾಜು 28 ಕೋಟಿ ರೂ. ವೆಚ್ಚದಲ್ಲಿ ಈ ಕಾಂಪೋಸ್ಟ್ ಯಾರ್ಡ್ ರೆಡಿಯಾಗಲಿದೆ. ಈಗಾಗಲೇ 13 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವರ್ಷದಲ್ಲೇ ಈ ಕಾಂಪೋಸ್ಟ್ ಯಾರ್ಡ್ ನಿರ್ಮಾಣ ಕಾರ್ಯವನ್ನ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ. ಬಳ್ಳಾರಿ ಮಹಾನಗರದಿಂದ ಬರುವ ಒಣ ಹಾಗೂ ಹಸಿ ಘನತ್ಯಾಜ್ಯವನ್ನ ಬೇರ್ಪಡಿಸಿ, ರೈತರಿಗೆ ಅನುಕೂಲವಾಗುವ ರಸಗೊಬ್ಬರ ತಯಾರಿಸಿ ಮಾರಾಟ ಮಾಡುವ ಚಿಂತನೆಯನ್ನೂ ಹೊಂದಲಾಗಿದೆ ಎಂದು ತಿಳಿಸಿದರು.