ಕರ್ನಾಟಕ

karnataka

ETV Bharat / city

ಜಿಂದಾಲ್​​ಗೆ ಭೂಮಿ ಪರಭಾರೆ ನ್ಯಾಯಸಮ್ಮತ, ಸೇಲ್​ ಡೀಡ್​ ಆಗಲೇಬೇಕು; ಕೊಂಡಯ್ಯ - ಲೀಸ್ ಕಂ ಸೇಲ್ ಡೀಡ್

ಅಂದಾಜು 10,000 ಎಕರೆ ಭೂಮಿಯನ್ನ ರಾಜ್ಯ ಸರ್ಕಾರವೇ ಅತ್ಯಂತ ಕಡಿಮೆ ದರದಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಆದನ್ನೇ ಜಿಂದಾಲ್ ಸಮೂಹ ಸಂಸ್ಥೆಗೆ ಪರಭಾರೆ ಮಾಡಲಾಗಿತ್ತು.

ಕೊಂಡಯ್ಯ
ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ

By

Published : Jun 3, 2021, 3:00 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ನ್ಯಾಯಸಮ್ಮತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ‌‌. ಕೊಂಡಯ್ಯ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿಯ ಬಾಲಾ ರಿಜೆನ್ಸಿ ಹೊಟೇಲ್​ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1994 ರ ಪ್ರಕಾರ ಅಂದಿನ ರಾಜ್ಯ ಸರ್ಕಾರವೇ ಲೀಸ್ ಕಂ ಸೇಲ್ ಡೀಡ್ ನಿಯಮಾನುಸಾರ ಅಂದಾಜು 10,000 ಎಕರೆ ಭೂಮಿಯನ್ನ ರಾಜ್ಯ ಸರ್ಕಾರವೇ ಅತ್ಯಂತ ಕಡಿಮೆ ದರದಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಆದನ್ನೇ ಜಿಂದಾಲ್ ಸಮೂಹ ಸಂಸ್ಥೆಗೆ ಪರಭಾರೆ ಮಾಡಲಾಗಿತ್ತು.

ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ವಿಚಾರ ನ್ಯಾಯಸಮ್ಮತವಾಗಿದೆ

ಲೀಸ್ ಕಂ ಸೇಲ್ ಡೀಡ್ ಪ್ರಕಾರವೇ ಇಂತಿಷ್ಟು ಅವಧಿಯೊಳಗೆ ನೀಡಲಾಗಿತ್ತು. ಈಗಾಗಲೇ ಆ ಭೂಮಿಯಲ್ಲಿ ಜಿಂದಾಲ್ ಸಮೂಹ ಸಂಸ್ಥೆ ಕಾರ್ಖಾನೆಯನ್ನು ವಿಸ್ತರಿಸಿದೆ. ಇದೀಗ ಸೇಲ್ ಡೀಡ್ ಮಾಡಿಕೊಡಲೇಬೇಕು. ಅದು ನ್ಯಾಯ ಸಮ್ಮತವಾಗಿದೆ ಎಂದು ಕೊಂಡಯ್ಯ ತಿಳಿಸಿದರು.

ಈ ಭೂಮಿ ಪರಭಾರೆ ವಿಚಾರದಲ್ಲಿ ಈ ಸರ್ಕಾರದ ಶಾಸಕರು- ಸಚಿವರು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜಿಂದಾಲ್ ಸಂಸ್ಥೆ ಸ್ಟೀಲ್ ಇಂಡಸ್ಟ್ರೀಸ್ ಹಾಕದೇ ಹೋಗದಿದ್ದರೆ ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗವಕಾಶ ಸೃಷ್ಟಿಯಾಗುತ್ತಿರಲಿಲ್ಲ. ಜಿಂದಾಲ್ ಸಂಸ್ಥೆ ಏನಾದ್ರೂ ಭ್ರಷ್ಟಾಚಾರ ನಡೆಸಿದ್ರೆ ಅದರ ವಿರುದ್ಧ ಮೊದಲು ಧ್ವನಿ ಎತ್ತುವೆ. ಈ ಹಿಂದೆ ಗಣಿ ಅಕ್ರಮದ ವಿರುದ್ಧ ಲೀಗಲ್ ಫೈಟ್ ಮಾಡಿದ್ದೇ ನಾನು ಎಂದ್ರು ಕೊಂಡಯ್ಯ.

ನಾನೇ ಪಿಐಎಲ್ ಹಾಕುವೆ: ಜಿಂದಾಲ್ ಸಮೂಹ ಸಂಸ್ಥೆಗೆ ಭೂಮಿ ಪರಭಾರೆ ಅವರ ಹೆಸರಿಗೆ ಸೇಲ್ ಡೀಡ್ ಮಾಡದೇ ಹೋದರೆ ನಾನೇ ಪಿಐಎಲ್ ಹಾಕುವೆ. ಬೇರೆ ಜಿಲ್ಲೆಯ ಶಾಸಕರಿಗೆ ಇದರ ತಳ- ಬುಡ ಗೊತ್ತಿಲ್ಲ. ಇಂಡಸ್ಟ್ರೀಸ್ ಮೇಲೆ ವಿಶೇಷ ಕಾಳಜಿ ಯಾಕಿತ್ತು ಅಂದ್ರೆ ಇಲ್ಲಿ ಅದಿರಿನ ಸಂಪತ್ತು ಹೆಚ್ಚಿತ್ತು. ಹೀಗಾಗಿ, ಸ್ಟೀಲ್ ಇಂಡಸ್ಟ್ರೀಸ್ ಗೆ ವಿಶೇಷ ಕಾಳಜಿ ವಹಿಸಿರುವೆ.

ನನ್ನ ಜಿಲ್ಲೆಯ ಜನರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ಅವರಿಗೆ ಉದ್ಯೋಗವಕಾಶ ಕಲ್ಪಿಸಬೇಕೆಂಬುದೇ ನನ್ನ ಆಶಯವಾಗಿದೆ. ನಾನು ಸ್ಟೀಲ್ ಇಂಡಸ್ಟ್ರೀಸ್ ಹಾಕಲು ಅಶಕ್ತನಾಗಿದ್ದೆ. ಹೀಗಾಗಿ, ಅವರಿಗೆ ಬೆಂಬಲ ಸೂಚಿಸಿರುವೆ. ಇದು ನನ್ನ ಕನಸಾಗಿತ್ತು. ಅದನ್ನ ಈಡೇರಿಸಿದ್ದೇವೆ ಎಂದ್ರು ಕೊಂಡಯ್ಯ.

ABOUT THE AUTHOR

...view details