ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದ್ದು, ಬೆನ್ನು ಮೂಳೆ ಮುರಿದ ತಾಯಿಯ ನೋವನ್ನು ನೋಡಿದ ಮಗ ಕಣ್ಣೀರು ಹಾಕುತ್ತಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಬಳ್ಳಾರಿ ಸಂಸದರ ಊರಲ್ಲಿ ವೈದ್ಯರ ಕೊರತೆ: ಸೆಲ್ಫಿ ವಿಡಿಯೋ ಮಾಡಿ ನೋವು ತೋಡಿಕೊಂಡ ಬಾಲಕ! - ಸರ್ಕಾರಿ ಪ್ರಾಥಮಿಕ ಆಸ್ಪತ್ರೆ
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯದಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದ್ದು, ಬೆನ್ನು ಮೂಳೆ ಮುರಿದ ತಾಯಿಯ ನೋವನ್ನು ನೋಡಿದ ಮಗ ಕಣ್ಣೀರು ಹಾಕುತ್ತಲೇ ಸೆಲ್ಫಿ ವಿಡಿಯೋ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದ ಹಿನ್ನೆಲೆ ರಾತ್ರಿ ವೇಳೆ ಆಸ್ಪತ್ರೆಗೆ ಹೋಗಿದ್ದರು. ಆ ವೇಳೆ ಆಸ್ಪತ್ರೆಯಲ್ಲಿ ರೋಗಿಯನ್ನು ವಿಚಾರಿಸಲು ಯಾರೂ ಇರಲಿಲ್ಲ. ರಾತ್ರಿ ಪಾಳಿಗೆ ವೈದ್ಯರನ್ನು ನಿಯೋಜಿಸಿದ್ದರೂ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಅದರಿಂದ ಪ್ರಾಥಮಿಕ ಚಿಕಿತ್ಸೆ ನೀಡುವವರೇ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಈ ವೇಳೆ ಬಾಲಕನೋರ್ವ ಸೆಲ್ಫಿ ವಿಡಿಯೋ ಮಾಡಿ, ಸರ್ಕಾರಿ ಆಸ್ಪತ್ರೆಯಲ್ಲಿನ ತಾವು ಪಟ್ಟ ಪಾಡನ್ನು ಹೇಳಿಕೊಂಡಿದ್ದಾನೆ. ಬಳ್ಳಾರಿ ಬಿಜೆಪಿ ಸಂಸದ ವೈ.ದೇವೇಂದ್ರಪ್ಪ ಅವರ ತವರೂರು ಅರಸೀಕೆರೆ ಗ್ರಾಮದಲ್ಲೇ ಇಂತಹ ದುಸ್ಥಿತಿ ಕಂಡು ಬಂದಿದ್ದು, ಇದಕ್ಕೆ ಆರೋಗ್ಯ ಸಚಿವರೇ ಉತ್ತರಿಸಬೇಕಿದೆ.