ಹಾವೇರಿ :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಶಾಪ ವಿಮೋಚನೆಗಾಗಿ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಶ್ರೀ ಮೈಲಾರ ಲಿಂಗೇಶ್ವರನ ಸನ್ನಿಧಾನಕ್ಕೆ ಕೆಪಿಸಿಸಿ ಸಾರಥಿ.. ಶಾಪ ವಿಮೋಚನೆಗಾಗಿ ಡಿಕೆಶಿ ಹೀಗೆ ಮಾಡಿದರು.. ಡಿ ಕೆ ಶಿವಕುಮಾರ್ 2017ರಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಆಲಿಸಲು ಹೆಲಿಕ್ಯಾಪ್ಟರ್ನಲ್ಲಿ ಬಂದಿದ್ದರು. ಈ ವೇಳೆ ಹೆಲಿಕ್ಯಾಪ್ಟರ್ನಲ್ಲಿ ದೇವಸ್ಥಾನದ ಮೇಲ್ಭಾಗದಲ್ಲಿ ಹಾಯ್ದು ಹೋಗಿದ್ದರು. ಇದಾದ ಬಳಿಕ ಇಡಿ ಸಂಕಷ್ಟ ಹಾಗೂ ಜೈಲುವಾಸ ಅನುಭವಿಸಿದ್ದರು.
ಹಾಗಾಗಿ, ಇಂದು ಬೆಳಗ್ಗೆ 9.30ಕ್ಕೆ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಭೇಡಿ ನೀಡಿದ ಡಿಕೆಶಿ, ಶ್ರೀಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ರುದ್ರಸ್ನಾನ ವಿಧಿ, ರುದ್ರಾಭಿಷೇಕ ಮತ್ತು ಕುಂಕುಮಾರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದ್ರು. ಜೊತೆಗೆ ಬೆಳ್ಳಿಯ ಹೆಲಿಕ್ಯಾಪ್ಟರ್ನ ದೇಗುಲಕ್ಕೆ ಅರ್ಪಿಸಿದರು.
ಬಳಿಕ ಗಂಗಮಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿಯೂ ಕೂಡ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಪಿ ಟಿ ಪರಮೇಶ್ವರ ನಾಯಕ್, ಮನೋಹರ್ ತಹಶೀಲ್ದಾರ್ ಸೇರಿ ವಿವಿಧ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.