ಬಳ್ಳಾರಿ :ಜೆಎಸ್‌ಡ್ಲ್ಯೂ ಕಂಪನಿ ಕೋವಿಡ್ ಕಾರಣ ಹೇಳಿ ಎಕಾಏಕಿ 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆ ಸಂತ್ರಸ್ತ ಉದ್ಯೋಗಿಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ 25 ವರ್ಷಗಳಿಂದ ಜಿಂದಾಲ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಏಕಾಏಕಿ ಆಗಸ್ಟ್ 31ರೊಳಗೆ ರಾಜೀನಾಮೆ ಸಲ್ಲಿಸಬೇಕು, ಇಲ್ಲದಿದ್ದರೆ ಯಾವ ಸೌಲಭ್ಯ ಬರುವುದಿಲ್ಲ ಎಂದು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಮ್ಯಾನೇಜ್ಮೆಂಟ್‌ನ ಕೇಳಲು ಹೋದರೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಜಿಂದಾಲ್ ಉದ್ಯೋಗಿ ಜೋಷಿ ಎಂಬುವರು ತಮ್ಮ ಅಳಲನ್ನು ತೋಡಿಕೊಂಡರು.