ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಒಂದು ಕಾಲದಲ್ಲಿ ದೇಶದ ಗಮನವನ್ನೇ ತನ್ನತ್ತ ಸೆಳೆದಿದ್ದ ಬಳ್ಳಾರಿಯ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಅಲ್ಪಕಾಲದಲ್ಲೇ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದರು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ 4 ವರ್ಷ ಜೈಲು ಕೂಡಾ ಸೇರಿದ್ದರು. ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ಇವರು ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಅರಮನೆ ಮೈದಾನದಲ್ಲಿ ಮಗಳ ವೈಭೋಗದ ಮದುವೆ ಮಾಡಿ ಜನರ ಗಮನ ಸೆಳೆದಿದ್ದರು. ಇತ್ತೀಚೆಗೆ ಪುತ್ರ ಕಿರೀಟಿ ರೆಡ್ಢಿಗೆ ಅದ್ಧೂರಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಿಸಿದ್ದರು. ಇದೀಗ ತಮ್ಮ ಪತ್ನಿಯ ಫೋಟೋ ಶೂಟ್ ಅನ್ನು ಅತ್ಯಂತ ವಿಶೇಷವಾಗಿ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ ರವಿವರ್ಮನ ಪೇಂಟಿಂಗ್ ಶೈಲಿಯಲ್ಲಿ ಜನಾರ್ದನ ರೆಡ್ಡಿ ಪತ್ನಿಯ ಫೋಟೋಶೂಟ್! - ಜನಾರ್ದನ ರೆಡ್ಡಿ ಅರುಣಾ ಫೋಟೋ ಶೂಟ್
ರಾಜ ಮನೆತನದಲ್ಲಿ ಜನಿಸಿದ ರಾಜ ರವಿವರ್ಮ ಅದ್ಭುತ ಚಿತ್ರ ಕಲಾವಿದ. ತಮ್ಮ ಕುಂಚ ಹಾಗೂ ಕೈಚಳಕದಿಂದ ಬಿಡಿಸಿದ ಅದ್ಭುತ ಚಿತ್ರಗಳು ವಿಶ್ವವಿಖ್ಯಾತವಾಗಿವೆ. ಅಂತಹ ವ್ಯಕ್ತಿಯ ಆಯ್ದ ಚಿತ್ರಪಟವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಅವರ ಫೋಟೋಶೂಟ್ ಮಾಡಿಸಿದ್ದಾರೆ.
ರಾಜ ಮನೆತನದಲ್ಲಿ ಜನಿಸಿದ ರಾಜ ರವಿವರ್ಮ ಜಗದ್ವಿಖ್ಯಾತ ಕಲಾವಿದ. ತಮ್ಮ ಕುಂಚ ಹಾಗೂ ಕೈಚಳಕದಿಂದ ಬಿಡಿಸಿದ ಅದ್ಭುತ ಚಿತ್ರಗಳ ಮೂಲಕ ಮನೆಮಾತಾದವರು. ಅಂತಹ ವ್ಯಕ್ತಿಯ ಆಯ್ದ ಚಿತ್ರಪಟವನ್ನು ಮುಂದಿಟ್ಟುಕೊಂಡು ಜನಾರ್ದನ ರೆಡ್ಡಿ ತಮ್ಮ ಪತ್ನಿ ಲಕ್ಷ್ಮೀ ಅರುಣಾ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. ರವಿವರ್ಮನ ಶೈಲಿಯ ಮಹಿಳೆಯ ಸುಂದರವಾದ ಪೇಂಟಿಂಗ್‌ಗಳನ್ನು ಒಂದು ಕಡೆ, ಅದೇ ಲುಕ್ನಲ್ಲಿ ಮತ್ತೊಂದು ಕಡೆ ಅರುಣಾ ಅವರ ಫೋಟೋಶೂಟ್ ಮಾಡಿಸಿದ್ದಾರೆ.
ರವಿವರ್ಮಗೆ ಅರ್ಪಣೆ:ಅಲ್ಲದೇ, ಅದಕ್ಕೊಂದಿಷ್ಟು ಅಡಿಬರಹ ನೀಡುವ ಮೂಲಕ ರವಿವರ್ಮ ಅವರನ್ನು ಹಾಡಿಹೊಗಳಿದ್ದಾರೆ. 'ಕೈಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸಲು ಕುಳಿತರೆ ರವಿವರ್ಮಾ ಎಂಬ ಕಲಾವಿದರಿಗೆ ರವಿವರ್ಮರೇ ಸಾಟಿ' ಎಂದು ಬಣ್ಣಿಸಿದ್ದಾರೆ. ತಮ್ಮ ಮಡದಿಯ ಈ ಫೋಟೋಗಳನ್ನು ರವಿವರ್ಮ ಅವರಿಗೆ ಅರ್ಪಿಸಿದ್ದಾರಂತೆ ಜನಾರ್ದನ ರೆಡ್ಡಿ. ಗೌರವದ ಪ್ರತೀಕ ಮತ್ತು ಸಾಂಪ್ರದಾಯಿಕ ಉಡುಪಿನೊಂದಿಗೆ ಸುಂದರ ಸ್ತ್ರೀ ಮೂರ್ತಿಗಳ ಚಿತ್ರಗಳನ್ನು ಬಿಡಿಸಿ ವಿಶ್ವದ ಗಮನ ಸೆಳೆದಿರುವ ರವಿವರ್ಮ ಅವರ ಆಯ್ದ ಕೆಲವು ಚಿತ್ರಗಳ ಪ್ರತಿರೂಪದ ಫೋಟೋಶೂಟ್ಗಳು ಕಲಾವಿದನ ಕಲೆಗೆ ಗೌರವ ಪೂರ್ವಕವಾಗಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ಜನಾರ್ದನ ರೆಡ್ಡಿ.