ಬಳ್ಳಾರಿ:ನಡು ರಸ್ತೆಯಲ್ಲಿಯೇ ಪೊಲೀಸ್ ಹಾಗೂ ಆಟೋ ಚಾಲಕ ನಡುವೆ ಜಗಳ ನಡೆದು ಆಟೋ ಚಾಲಕ ಟ್ರಾಫಿಕ್ ಪೊಲೀಸ್ಗೆ ಹೊಡೆದ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ನಗರದ ದುರ್ಗಮ್ಮ ಸರ್ಕಲ್ನ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಗೆ ದಾರಿ ಬಿಡದೇ ಅನಗತ್ಯವಾಗಿ ಆಟೋ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡಿದ್ದನ್ನು ಗಮನಿಸಿದ ಸಂಚಾರ ಪೊಲೀಸ್ ಬಸ್ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಅದಕ್ಕೆ ಕ್ಯಾರೇ ಎನ್ನದ ಆಟೋ ಚಾಲಕ, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಸ್ಥಳದಲ್ಲಿ ಸಂಚಾರ ಎಎಸ್‌ಐ ಬುದ್ಧಿವಾದ ಹೇಳುತ್ತಿದ್ದರೂ ಆಟೋ ಚಾಲಕ ಕಪ್ಪಗಲ್ ರಸ್ತೆಯ ನಿವಾಸಿ ರಾಮಕೃಷ್ಣ(47) ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಗೋಪಾಲಕೃಷ್ಣ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣ ಅಲ್ಲಿದ್ದ ಪೊಲೀಸರೆಲ್ಲ ಸೇರಿ ನಂತರ ಆಟೋ ಚಾಲಕನಿಗೆ ಕಪಾಳಕ್ಕೆ ಹೊಡೆದು ಗಾಂಧಿನಗರ ಠಾಣೆಗೆ ಒಪ್ಪಿಸಿದರು.