ಕರ್ನಾಟಕ

karnataka

ETV Bharat / city

ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳಹರಿವು: ಒಂದೇ ದಿನ 6 ಟಿಎಂಸಿ ನೀರು ಹೆಚ್ಚಳ - Tungabhadra Dam water

ಜಿಲ್ಲೆಯಾದ್ಯಂತ ಕಾರ್ಮೋಡ ಕವಿದಿದೆ. ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ತುಂಗಭದ್ರಾ ಅಣೆಕಟ್ಟೆಗೆ ಇದೇ ರೀತಿಯ ಒಳಹರಿವಿದ್ದರೆ ಇನ್ನೊಂದು ವಾರದಲ್ಲಿ ಜಲಾಶಯ ತುಂಬಬಹುದು.

Increased inflow in Tungabhadra Reservoir
ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿದ ಒಳಹರಿವು

By

Published : Jul 8, 2022, 8:12 AM IST

ವಿಜಯನಗರ: ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ 6 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದೆ. ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಸತತವಾಗಿ ಒಳಹರಿವು ಹೆಚ್ಚುತ್ತಿದೆ. ಬರುವ ದಿನಗಳಲ್ಲಿ ಈ ಹರಿವು ಇನ್ನಷ್ಟು ಹೆಚ್ಚಾಗಲಿದೆ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳಿಂದ ತಿಳಿದು ಬಂದಿದೆ.

ಗುರುವಾರ 60,941 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಬುಧವಾರ 34,075 ಕ್ಯೂಸೆಕ್, ಮಂಗಳವಾರ 22,536 ಕ್ಯೂಸೆಕ್ ಒಳಹರಿವು ಇತ್ತು. ಸೋಮವಾರ 11,370 ಕ್ಯುಸೆಕ್ ಒಳಹರಿವು ದಾಖಲಾಗಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಸದ್ಯ 58.212 ಟಿಎಂಸಿ ನೀರು ಸಂಗ್ರಹವಿದೆ. ಬುಧವಾರ 52.989 ಟಿಎಂಸಿ ನೀರಿತ್ತು.


ಇದೇ ರೀತಿ ಒಳಹರಿವಿದ್ದರೆ ಇನ್ನೊಂದು ವಾರದಲ್ಲಿ ಜಲಾಶಯ ಸಂಪೂರ್ಣ ತುಂಬಬಹುದು. ಜಿಲ್ಲೆಯಾದ್ಯಂತ ಕಾರ್ಮೋಡ ಕವಿದಿದೆ. ಎಲ್ಲೆಡೆ ತುಂತುರು ಮಳೆಯಾಗುತ್ತಿದೆ. ಸತತ ನಾಲ್ಕು ದಿನಗಳಿಂದ ಇದೇ ರೀತಿಯ ವಾತಾವಾರಣ ಕಂಡುಬಂದಿದೆ.

ಇದನ್ನೂ ಓದಿ:ಇತಿಹಾಸ ನಿರ್ಮಿಸಿದ ಕಾವೇರಿ : ಬರೋಬ್ಬರಿ 53 ದಿನಗಳ ಕಾಲ ಕೆಆರ್​ಎಸ್​ ಡ್ಯಾಂ ಸಂಪೂರ್ಣ ಭರ್ತಿ

ABOUT THE AUTHOR

...view details