ಬಳ್ಳಾರಿ: ಪ್ರಿಯಾಂಕ್ ಖರ್ಗೆ ಅವರ ತಂದೆಯಂತೆ ಸಂಸ್ಕಾರವಂತ ಎಂದು ತಿಳಿದುಕೊಂಡಿದ್ದೆ, ಆದರೆ ಅವರು ತಂದೆಯ ಗುಣಗಳನ್ನು ನೋಡಿ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ನೌಕರಿಗಾಗಿ ಲಂಚ- ಮಂಚ ಹೇಳಿಕೆ ವಿಚಾರದ ಕುರಿತಾಗಿ ಬಳ್ಳಾರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅವರು, ಖರ್ಗೆಯವರು ಮಾತನಾಡುವಾಗ ನಾಲಿಗೆ ಮೇಲೆ ಹತೋಟಿ ಇರಬೇಕು. ಸದನದಲ್ಲಿ ಖರ್ಗೆಯನ್ನು ಪ್ರಿಯಾಂಕ, ಪ್ರಿಯ ಅಂತಾ ಹಂಗಿಸುತ್ತಿದ್ದರು. ಆದರೆ ನಾನು, ತಂದೆ ತರಹ ಬುದ್ಧಿವಂತ ಎಂದು ಸಣ್ಣ ಖರ್ಗೆ ಎಂದು ಕರೆಯುತ್ತಿದ್ದೆ ಎಂದರು.