ಕರ್ನಾಟಕ

karnataka

ವಿಸಿಟಿಂಗ್ ಕಾರ್ಡ್​ಗಾಗಿ ಕ.ಸಾ.ಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಡಾ.ಮಹೇಶ ಜೋಶಿ

By

Published : Mar 2, 2021, 7:43 PM IST

ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್​​ ಸೇರಲು 500 ರೂ. ಪಾವತಿಸಬೇಕಾಗಿದೆ.‌ ಮೊದಲು 250 ರೂ. ಇತ್ತು. ಶುಲ್ಕವನ್ನು ಹೆಚ್ಚು ಮಾಡಿದ್ದರಿಂದ ಸದಸ್ಯರ ಕುಸಿದಿದೆ. ಇದು ಅಂಕಿ, ಸಂಖ್ಯೆಗಳಿಂದ ತಿಳಿದು ಬರುತ್ತದೆ. ನಾನು ರಾಜ್ಯಧ್ಯಕ್ಷನಾದರೆ 250 ರೂ. ಶುಲ್ಕವನ್ನಾಗಿ ಮಾಡುತ್ತೇನೆ ಎಂದು ಡಾ. ಮಹೇಶ್​ ಜೋಶಿ ಭರವಸೆ ನೀಡಿದರು.

i-am-not-participating-in-kannada-sahitya-parishad-election-for-visiting-card
ಕಸಾಪ ಚುನಾವಣೆ

ಹೊಸಪೇಟೆ: ಪುನರ್ವಸತಿಗಾಗಿ ಮತ್ತು ವಿಸಿಟಿಂಗ್ ಕಾರ್ಡ್​ಗಾಗಿ ನಾನು ಕನ್ನಡ ಸಾಹಿತ್ಯ ಪರಿಷತ್​​ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಕ.ಸಾ.ಪ ರಾಜ್ಯಾಧ್ಯಕ್ಷ ಆಕಾಂಕ್ಷಿ ಡಾ.ಮಹೇಶ್ ಜೋಶಿ ಸ್ಪಷ್ಟಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪರಿಷತ್ತು ಕನ್ನಡಿಗರ ಸ್ವತ್ತು ಎನ್ನುವ ಮನೋಭಾವನೆ ಬರಬೇಕಾಗಿದೆ. ಪರಿಷತ್ತಿನ ಸಿದ್ದಾಂತ, ಗುಂಪು ಹಾಗೂ ಯಾವುದೇ ಜಾತಿಗೆ ಸಿಮೀತವಾಗಬಾರದು. ಕನ್ನಡ ನಮ್ಮದು ಎನ್ನುವ ಭಾವನೆ ಬರಬೇಕಾಗಿದೆ ಎಂದು ಹೇಳಿದರು.

ವಿಸೀಟಿಂಗ್ ಕಾರ್ಡ್​ಗಾಗಿ ಕಸಾಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ- ಮಹೇಶ್‌ ಜೋಶಿ

ಸದ್ಯ ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್​​ ಸೇರಲು 500 ರೂ. ಪಾವತಿಸಬೇಕಾಗಿದೆ.‌ ಮೊದಲು 250 ರೂ. ಇತ್ತು. ಶುಲ್ಕವನ್ನು ಹೆಚ್ಚು ಮಾಡಿದ್ದರಿಂದ ಸದಸ್ಯರ ಕುಸಿದಿದೆ. ಇದು ಅಂಕಿ ಸಂಖ್ಯೆಗಳಿಂದ ತಿಳಿದು ಬರುತ್ತದೆ. ನಾನು ರಾಜ್ಯಧ್ಯಕ್ಷನಾದರೇ 250 ರೂ. ಶುಲ್ಕವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡ ಶಾಲೆಯನ್ನು ಮುಚ್ಚದಂತೆ ಹಾಗೂ ಮುಚ್ಚಿರುವ ಶಾಲೆಯನ್ನು ತೆರೆಯುವು ಹಾಗೆ ಸರಕಾರಕ್ಕೆ ಒತ್ತಾಯ ಮಾಡಲಾಗುವುದು. ಸರಕಾರದ ಜತೆಗೆ ನಿರಂತರ ಸಂಪರ್ಕದೊಂದಿಗೆ ಕೆಲಸವನ್ನು ಮಾಡಲಾಗುವುದು.‌ ಅಲ್ಲದೇ, ಎರಡು ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡುವ ಆಲೋಚನೆ ಇದೆ. ರಾಜಕೀಯವಾಗಿ ತಟಸ್ಥನಾಗಿದ್ದೇನೆ. ಎಡನೂ ಅಲ್ಲ, ಬಲನೂ ಅಲ್ಲ. ಮಾನವ ಪಂಥಕ್ಕೆ ಸೇರಿದ ಕನ್ನಡದವನು ಎಂದು ಹೇಳಿದರು‌.

ABOUT THE AUTHOR

...view details