ಹೊಸಪೇಟೆ :ವಿಜಯನಗರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಮಾರನಹಳ್ಳಿ ತಾಂಡದಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದ ಹಲವು ಮನೆಗಳಿಗೆ ಹಾನಿಯುಂಟಾಗಿದೆ. ಜೊತೆಗೆ ಹಲವು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಬಿರುಗಾಳಿ ಮಳೆಗೆ 10ಕ್ಕೂ ಮನೆಗಳಿಗೆ ಹಾನಿಯುಂಟಾಗಿದ್ದು, ಈ ಪೈಕಿ ಕೆಲ ಮನೆಗಳು ಭಾಗಶಃ ನೆಲಕಚ್ಚಿವೆ. ಗಾಳಿಯ ವೇಗಕ್ಕೆ ಕೆಲ ಮನೆಗಳ ತಗಡುಗಳು ಹಾರಿಹೋಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.