ಕರ್ನಾಟಕ

karnataka

By

Published : Mar 8, 2021, 12:29 PM IST

ETV Bharat / city

ಕೆಂಡವನ್ನು ಮೈಮೇಲೆ ಎರಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದ ಜನ - ವಿಡಿಯೋ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಓಬಳೇಶ್ವರ ಸ್ವಾಮಿಯ ಜಾತ್ರೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಈ ಜಾತ್ರೆಯಲ್ಲಿ ಕೆಂಡವನ್ನು ಮೈಮೇಲೆ ಎರಚಿಕೊಂಡು ಭಕ್ತರು ಪರಾಕಾಷ್ಠೆ ಮೆರೆದರು.

ಓಬಳೇಶ್ವರ ಸ್ವಾಮಿಯ ಜಾತ್ರೆ
ಓಬಳೇಶ್ವರ ಸ್ವಾಮಿಯ ಜಾತ್ರೆ

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ಓಬಳೇಶ್ವರ ಸ್ವಾಮಿಯ ಜಾತ್ರೆ ಜರುಗಿತು. ಈ ವೇಳೆ ಕೆಂಡವನ್ನು ಮೈ ಮೇಲೆ ಎರಚಿಕೊಂಡು ಭಕ್ತರು ಪರಾಕಾಷ್ಠೆ ಮೆರೆದರು.

ಓಬಳೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಕೆಂಡ ಮೈಮೇಲೆ ಎರಚಿಕೊಂಡ ಭಕ್ತರು

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಇಂತಹ ಆಚರಣೆಗಳನ್ನು ತಲೆತಲಾಂತರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಬೆಂಕಿಯ ಕೆಂಡದ ಮೇಲೆ ಓಡಾಡಿದ ಭಕ್ತರು, ಬಳಿಕ ಮೈಮೇಲೆ ಕೆಂಡವನ್ನು ಎರಚಿಕೊಂಡು ಅಚ್ಚರಿ ಮೂಡಿಸಿದರು.

ಈ ಜಾತ್ರೆಯನ್ನು ಗುಗ್ಗರಿ ಹಬ್ಬವೆಂತಲೂ ಸಹ ಸ್ಥಳೀಯರು ಕರೆಯುತ್ತಾರೆ. 2 ದಿನಗಳ ಕಾಲ ಧಾರ್ಮಿಕ ಆಚರಣೆಗಳನ್ನು ನಡೆಸಿ, ಕಾಸು ಮೀಸಲು, ಗಂಗೆ ಪೂಜೆ ಮಾಡಲಾಗುತ್ತದೆ. ಉತ್ಸವದ ಕಡೆಯ ದಿನವಾದ ನಿನ್ನೆ ರಾತ್ರಿ 7 ರಿಂದ 11 ಗಂಟೆಯವರೆಗೆ ಇಲ್ಲಿಯ ಭಕ್ತರು ಕೆಂಡದ ರಾಶಿ ಮೇಲೆ ಜಿಗಿಯುವ ಸಾಹಸ ಮಾತ್ರ ನೋಡುಗರನ್ನು ಬೆರಗುಗೊಳಿಸಿತು.

ABOUT THE AUTHOR

...view details