ಕರ್ನಾಟಕ

karnataka

ETV Bharat / city

ಮುಂದಿನ ವರ್ಷದ ಹಂಪಿ ಉತ್ಸವಕ್ಕೆ ಪ್ರಧಾನಿ ಮೋದಿ ಕರೆತರಲು ಪ್ರಯತ್ನಿಸುವೆ: ಸಚಿವ ಸಿ.ಟಿ.ರವಿ - ಹಂಪಿ ಉತ್ಸವ 2020

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಚಾಲನೆ ನೀಡಿದರು.

Tourism minister C.T.Ravi
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

By

Published : Jan 10, 2020, 5:02 PM IST

ಹೊಸಪೇಟೆ:ತಾಲೂಕಿನ ಹಂಪಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೃಷಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಬಾರಿಯ ಐತಿಹಾಸಿಕ ಹಂಪಿ ಉತ್ಸವದಲ್ಲಿ 900 ಕಲಾವಿದರು ಹಾಗೂ 110 ಕಲಾ ತಂಡಗಳು ಭಾಗವಹಿಸಲಿವೆ. ಮುಂದಿನ ವರ್ಷದ ಹಂಪಿ ಉತ್ಸವಕ್ಕೆ ನಿಗದಿತ ದಿನಾಂಕ ಮಾಡುವ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಅಲ್ಲದೆ, ಪ್ರವಾಸೋದ್ಯಮ ಸಚಿವನಾಗಿ ಮುಂದುವರಿದರೆ ಪ್ರಧಾನಿ ಮೋದಿ ಅವರನ್ನು ಉತ್ಸವಕ್ಕೆ ಕರೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವದ ಮೆರುಗು ಮರುಕಳಿಸುವಂತೆ ಉತ್ಸವ ಮಾಡಲಾಗುತ್ತದೆ. ಉತ್ಸವಗಳನ್ನು ಮಾಡಲು ಮುಖ್ಯಮಂತ್ರಿ ಆದವರಿಗೆ ಮನಸ್ಸು, ಆಸಕ್ತಿ ಇರಬೇಕು. ಹಬ್ಬ-ಹರಿದಿನಗಳನ್ನು ಆಚರಿಸುವುದರಿಂದ ಅವುಗಳ ಐತಿಹಾಸಿಕ ಪರಂಪರೆ ನೆನಪಾಗುತ್ತದೆ. ಅದರ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. ಉತ್ಸವಗಳಿಗಾಗಿ ಇಂತಿಷ್ಟೇ ಅನುದಾನ ನಿಗದಿಪಡಿಸಬೇಕು ಎಂಬ ಅಂದಾಜು ಇದೆ. ಅದಕ್ಕೆ ತಕ್ಕಂತೆ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಹಂಪಿಯನ್ನು ವಿಶ್ವದಲ್ಲೇ ಮಾದರಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕಿದೆ. ಹಂಪಿ ನಮ್ಮ ರಾಜ್ಯದಲ್ಲಿರುವುದು ಸಂತೋಷದ ವಿಷಯ. ವಿಜಯನಗರ ಸಾಮ್ರಾಜ್ಯ ಕಲೆ, ಸಂಗೀತ ಸಾಹಿತ್ಯಕ್ಕೆ ಹೆಸರುವಾಸಿಯಾಗಿತ್ತು. ಇಂತಹ ಸ್ಥಳಗಳನ್ನು ಅಭಿವೃದ್ಧಿಗೊಳಿಸುವುದು ಸರ್ಕಾರ ಮತ್ತು ಸಾರ್ವಜನಿಕರ ಮುಖ್ಯ ಕರ್ತವ್ಯ ಎಂದರು.

ABOUT THE AUTHOR

...view details