ಕರ್ನಾಟಕ

karnataka

ETV Bharat / city

ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ: ಗಣಿನಾಡಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ - ಹಿಂದೂ ಮುಸ್ಲಿಮರಿಂದ ಮಸೀದಿ ನಿರ್ಮಾಣ

ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ-ಮುಸ್ಲೀಮರು ಚಾಲನೆ ನೀಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

mosque
ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ

By

Published : Jan 23, 2020, 10:01 AM IST

Updated : Jan 23, 2020, 11:25 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನೂತನ ಮಸೀದಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ-ಮುಸ್ಲಿಂ ಬಾಂಧವರು ಚಾಲನೆ ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಸಿರುಗುಪ್ಪ ತಾಲೂಕಿನ ಟಿ‌.ರಾಂಪುರ ಗ್ರಾಮದ ಹೃದಯ ಭಾಗದಲ್ಲಿರುವ ಹಳೆ ಮಸೀದಿಯನ್ನು ನೆಲಸಮಗೊಳಿಸಿ, ಹೊಸದಾದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಿಂದೂ ಧರ್ಮೀಯ ಮಠಾಧೀಶ ಹಾಲ್ವಿ ಮಠದ ಮಹಾಂತ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದ್ರು.

ನೂತನ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಹಾಂತ ಸ್ವಾಮೀಜಿ

ನಿಚ್ಚಣಿಕೆ ಸಹಾಯದೊಂದಿಗೆ ಮಸೀದಿಯ ಮಹಡಿ ಮೇಲೆ ಹತ್ತಿದ ಮಹಾಂತ ಸ್ವಾಮೀಜಿ, ಹಳೆಯ ಮಸೀದಿಯ ಒಂದು ಭಾಗವನ್ನು ಹಾರೆಯಿಂದ ನೆಲಸಮಗೊಳಿಸಿ, ಹೊಸ ಮಸೀದಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಟ್ಟರು.

ಟಿ.ರಾಂಪುರ ಗ್ರಾಮದ ಮುಖಂಡರಾದ ಕಟ್ಟೆಮ್ಯಾಗಳ ರುದ್ರ ಗೌಡ, ಆರ್.ಜೆ.ಪಂಪನಗೌಡ, ತೊಂಡೆ ಹಾಳು ಮಲ್ಲನ ಗೌಡ, ಚಿಂಚೇರಿ ತಿಮ್ಮನ ಗೌಡ, ಶಿವನಪ್ಪ ಮಾಸ್ಟರ್, ಪ್ರಕಾಶ ಗೌಡ, ಆರ್.ಜೆ.ರಮೇಶಗೌಡ, ನಾಗರಾಜ ಗೌಡ, ವೀರನ ಗೌಡ, ಚಂದ್ರ ಗೌಡ, ಉಪ್ಪಳಪ್ಪ ಸೇರಿದಂತೆ ಗ್ರಾಮದ ಸರ್ವಧರ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Last Updated : Jan 23, 2020, 11:25 AM IST

ABOUT THE AUTHOR

...view details